ಭಾರತದ ಮಹಿಳಾ ಟಿ-20 ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಕೊರೊನಾ ಸೋಂಕಿಗೊಳಗಾಗಿದ್ದಾರೆ. ವರದಿ ಸಕಾರಾತ್ಮಕವಾಗಿ ಬಂದ ನಂತ್ರ ಹರ್ಮನ್ಪ್ರೀತ್ ಕೌರ್ ಮನೆಯಲ್ಲಿ ಪ್ರತ್ಯೇವಾಗಿದ್ದಾರೆ. 32 ವರ್ಷದ ಹರ್ಮನ್ಪ್ರೀತ್ ಕೌರ್, ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಐದು ಏಕದಿನ ಪಂದ್ಯದ ತಂಡದಲ್ಲಿದ್ದರು. ಐದನೇ ಪಂದ್ಯದಲ್ಲಿ ಗಾಯಗೊಂಡ ಹರ್ಮನ್ಪ್ರೀತ್ ಕೌರ್, ಟಿ-20 ತಂಡದಿಂದ ಹೊರ ಬಿದ್ದಿದ್ದರು.
ಹರ್ಮನ್ಪ್ರೀತ್ ಕೌರ್ ಗೆ ಕೊರೊನಾ ಲಕ್ಷಣಗಳು ಕಂಡು ಬಂದಿದ್ದವು. ಹಾಗಾಗಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿ ಪಾಸಿಟಿವ್ ಬಂದ ಕಾರಣ ಅವರು ಮನೆಯಲ್ಲಿ ಪ್ರತ್ಯೇಕವಾಗಿದ್ದಾರೆಂದು ಆರೋಗ್ಯ ಇಲಾಖೆ ಹೇಳಿದೆ. ಇದಕ್ಕೂ ಮುನ್ನ ಸೋಮವಾರ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಕೊರೊನಾ ಪಾಸಿಟಿವ್ ಆಗಿದ್ದರು. ಇದಕ್ಕೂ ಮೊದಲು ಯೂಸುಫ್ ಪಠಾಣ್ ಗೆ ಕೊರೊನಾ ಕಾಣಿಸಿಕೊಂಡಿತ್ತು.
ರಸ್ತೆ ಸುರಕ್ಷತೆ ವಿಶ್ವ ಸರಣಿಯಲ್ಲಿ ಭಾಗವಹಿಸಿದ ಇಂಡಿಯಾ ಲೆಜೆಂಡ್ಸ್ ನ ನಾಲ್ಕು ಆಟಗಾರರಿಗೆ ಕೊರೊನಾ ಕಾಣಿಸಿಕೊಂಡಿದೆ. ರಸ್ತೆ ಸುರಕ್ಷತೆ ವಿಶ್ವ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್ ಇಂಡಿಯಾ ಲೆಜೆಂಡ್ಸ್ ನಾಯಕತ್ವ ವಹಿಸಿದ್ದರು. ತಂಡದಲ್ಲಿದ್ದ ಎಲ್ಲರಿಗೂ ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಲಾಗಿದೆ.