
ನವದೆಹಲಿ: ಮಹಿಳಾ ಫುಟ್ಬಾಲ್ ತಂಡದ ಆಟಗಾರ್ತಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತರಬೇತುದಾರ ಅಮಾನತುಕೊಂಡಿದ್ದಾರೆ.
ಅಂಡರ್ -17 ಮಹಿಳಾ ಫುಟ್ಬಾಲ್ ತಂಡದ ಆಟಗಾರ್ತಿಯರೊಂದಿಗೆ ಕೋಚ್ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಸಸ್ಪೆಂಡ್ ಮಾಡಲಾಗಿದ್ದು, ಕೂಡಲೇ ನಾರ್ವೆಯಿಂದ ಭಾರತಕ್ಕೆ ಮರಳುವಂತೆ ಸೂಚಿಸಲಾಗಿದೆ.
ಕೋಚ್ ಅಸಭ್ಯವಾಗಿ ವರ್ತಿಸುತ್ತಿರುವ ಬಗ್ಗೆ ಮಹಿಳಾ ಫುಟ್ಬಾಲ್ ತಂಡದ ಆಟಗಾರ್ತಿಯರು ಆರೋಪಿಸಿದ್ದರು. ಭಾರತೀಯ ಫುಟ್ ಬಾಲ್ ಫೆಡರೇಷನ್(IAFF) ಆಡಳಿತ ಮಂಡಳಿ ಕೋಚ್ ನನ್ನು ಅಮಾನತುಗೊಳಿಸಿ ಕೂಡಲೇ ನಾರ್ವೆಯಿಂದ ಬರುವಂತೆ ಸೂಚಿಸಿದ್ದು, ಘಟನೆ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ.