ನಾಲ್ಕನೇ ಹಾಗೂ ಕೊನೆ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಬ್ರಿಸ್ಬೇನ್ ತಲುಪಿದೆ. ಆದ್ರೆ ಅಲ್ಲಿ ಟೀಂ ಇಂಡಿಯಾ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಆಟಗಾರರಿಗೆ ಅನೇಕ ಸೌಲಭ್ಯಗಳು ಸಿಗ್ತಿಲ್ಲ.
ಟೀಂ ಇಂಡಿಯಾ ಉಳಿದುಕೊಂಡ ಹೊಟೇಲ್ ಈಜುಕೊಳವನ್ನು ಆಟಗಾರರು ಬಳಸುವಂತಿಲ್ಲ.
ಕೊರೊನಾ ಸೋಂಕು ಹರಡದಂತೆ ತಡೆಯಲು ಈ ನಿಯಮ ಜಾರಿಯಲ್ಲಿದೆ. ಬ್ರಿಸ್ಬೇನ್ ನಲ್ಲಿ ಕೊರೊನಾ ಸಂಖ್ಯೆ ಹೆಚ್ಚಿದ್ದು, ಅದನ್ನು ಹಾಟ್ಸ್ಪಾಟ್ ಎಂದು ಘೋಷಿಸಲಾಗಿದೆ. ಈ ಪ್ರದೇಶದಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿರುವ ಕಾರಣ ಹೊಟೇಲ್ ನಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಯಲ್ಲಿದೆ.
ಭಾರತ-ಆಸ್ಟ್ರೇಲಿಯಾ ಮಧ್ಯೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಉಭಯ ತಂಡಗಳು ಒಂದೊಂದು ಅಂಕ ಗಳಿಸಿದ್ದು ಸಮಬಲ ಸಾಧಿಸಿವೆ. ಒಂದು ಪಂದ್ಯ ಡ್ರಾ ಆಗಿದೆ. ಜನವರಿ 15ರಂದು ಬ್ರಿಸ್ಬೇನ್ ನಲ್ಲಿ ಕೊನೆಯ ನಿರ್ಣಾಯಕ ಪಂದ್ಯ ನಡೆಯಲಿದೆ. ಮಂಗಳವಾರ ಮಧ್ಯಾಹ್ನ ತಂಡ ಬ್ರಿಸ್ಬೇನ್ ತಲುಪಿದೆ. ಸಮೀಪದ ರೆಸ್ಟೋರೆಂಟ್ ನಿಂದ ಆಹಾರ ಬರ್ತಿದೆ. ಆಟಗಾರರ ಕೋಣೆಗೆ ಬೀಗ ಹಾಕಲಾಗಿದೆ. ಬಿಸಿಸಿಐ ಸ್ಥಳೀಯ ಸಿಎಂ ಸಂಪರ್ಕದಲ್ಲಿದೆ. ಇಲ್ಲಿನ ಎಲ್ಲ ಹೊಟೇಲ್ ಬಂದ್ ಆಗಿದೆ. ಶೌಚಾಲಯಗಳನ್ನು ಕೂಡ ಆಟಗಾರರೇ ಸ್ವಚ್ಛಗೊಳಿಸುವಂತಾಗಿದೆ.