ಕೇಪ್ ಟೌನ್ ನ ನ್ಯೂಲ್ಯಾಂಡ್ಸ್ ನಲ್ಲಿ ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಒಂದೇ ಒಂದು ರನ್ ಗಳಿಸದೇ ಆರು ವಿಕೆಟ್ ಕಳೆದುಕೊಂಡಿರುವ ಭಾರತ ಟೆಸ್ಟ್ ಕ್ರಿಕೆಟ್ ತಂಡವು ಅನಗತ್ಯ ಮರೆಯಲಾಗದ ದಾಖಲೆ ನಿರ್ಮಿಸಿದೆ.
ಕೆ.ಎಲ್. ರಾಹುಲ್ ಔಟಾದ ನಂತರ ಟೀಂ ಇಂಡಿಯಾ ಒಂದು ರನ್ ಗಳಿಸಲು ಸಾಧ್ಯವಾಗಲಿಲ್ಲ. ವಿರಾಟ್ ಕೊಹ್ಲಿ 46 ರನ್ ಗಳಿಸಿ ಔಟಾದರು. ಅದರ ನಂತರ ಎಲ್ಲಾ ಆಟಗಾರರು ಡಕ್ ಔಟ್ ಆದರು. ಟೆಸ್ಟ್ ಇತಿಹಾಸದಲ್ಲಿ ಯಾವುದೇ ತಂಡ ಒಂದೇ ಒಂದು ರನ್ ಗಳಿಸದೆ ಕೊನೆಯ 6 ವಿಕೆಟ್ ಕಳೆದುಕೊಂಡಿರುವುದು ಇದೇ ಮೊದಲು.
11 ಬ್ಯಾಟ್ಸ್ ಮನ್‌ಗಳಲ್ಲಿ ಆರು ಮಂದಿ ಒಂದೇ ಒಂದು ರನ್ ಗಳಿಸದೆ ನಿರ್ಗಮಿಸಿದರು. ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜಾ ರನ್ ಗಳಿಸಲಿಲ್ಲ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕ್ರಮವಾಗಿ 39 ಮತ್ತು 46 ರನ್ ಗಳಿಸಿದ್ದು, ಪ್ರವಾಸಿಗರಿಗೆ 98 ರನ್‌ಗಳ ಮುನ್ನಡೆ ಸಾಧಿಸಲು ನೆರವಾಯಿತು. ಶುಭಮನ್ ಗಿಲ್ ಕೂಡ 36 ರನ್ ಗಳಿಸಿ ಮಾರ್ಕೊ ಜಾನ್ಸೆನ್‌ಗೆ ಕ್ಯಾಚಿತ್ತರು.