ನವದೆಹಲಿ: ಕಾಮನ್ ವೆಲ್ತ್ ಗೇಮ್ಸ್ ಪದಕ ವಿಜೇತೆ ಬಾಕ್ಸರ್ ಜಾಸ್ಮಿನ್ ಲಂಬೋರಿಯಾ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದಾರೆ.
ಭಾರತೀಯ ಸೇನೆಯು CWG ಬಾಕ್ಸಿಂಗ್ ನಲ್ಲಿ ಕಂಚಿನ ಪದಕ ವಿಜೇತೆ ಜಾಸ್ಮಿನ್ ಲಂಬೋರಿಯಾ ಅವರನ್ನು ಸೇನಾ ಪೊಲೀಸ್ ಕಾರ್ಪ್ಸ್ ನಲ್ಲಿ ಹವಾಲ್ದಾರ್ ಆಗಿ ನೇಮಕ ಮಾಡಿದೆ.
2022 ರಲ್ಲಿ ಕಾಮನ್ ವೆಲ್ತ್ ಗೇಮ್ಸ್ (CWG) ನಲ್ಲಿ 60 ಕೆಜಿ ಬಾಕ್ಸಿಂಗ್‌ನಲ್ಲಿ ಲಂಬೋರಿಯಾ ಕಂಚಿನ ಪದಕವನ್ನು ಗೆದ್ದಿದ್ದಾರೆ. ಜಾಸ್ಮಿನ್ ಲಂಬೋರಿಯಾ ಅವರು ಭಾರತೀಯ ಸೇನೆಯ ಮಿಷನ್ ಒಲಿಂಪಿಕ್ಸ್ ಹೆಸರಿನ ಯೋಜಿತ ಕಾರ್ಯಕ್ರಮದ ಅಡಿಯಲ್ಲಿ ಹವಾಲ್ದಾರ್ ಆಗಿ ನೇಮಕಗೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕಾರ್ಯಕ್ರಮದ ಅಡಿಯಲ್ಲಿ, ಸೇನೆಯು ವಿವಿಧ ‘ಮಿಷನ್ ಒಲಿಂಪಿಕ್ಸ್ ವಿಂಗ್ಸ್’ ಅನ್ನು ರಚಿಸಿದೆ, ‘ಮಿಷನ್ ಒಲಂಪಿಕ್ಸ್ ವಿಂಗ್’ನಿಂದ ಪೋಷಿಸಲ್ಪಟ್ಟ ಕೆಲವು ಗಮನಾರ್ಹ ಕ್ರೀಡಾಪಟುಗಳಲ್ಲಿ ಸುಬೇದಾರ್ ನೀರಜ್ ಚೋಪ್ರಾ, ಸುಬೇದಾರ್ ಅವಿನಾಶ್ ಸೇಬಲ್, ನಾಯಬ್ ಸುಬೇದಾರ್ ಜೆರೆಮಿ ಮತ್ತು ಹವ್ ಅಚಿಂತಾ ಸೇರಿದ್ದಾರೆ.
ಜಾಸ್ಮಿನ್ ಅವರು ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ವಿವಿಧ ಪದಕಗಳನ್ನು ಗೆದ್ದಿದ್ದಾರೆ. ಅವರು ಖೇಲೋ ಇಂಡಿಯಾ ಯೂತ್ ಗೇಮ್ಸ್ 2020, ಮಹಿಳಾ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಮತ್ತು ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಂತಹ ಪಂದ್ಯಾವಳಿಗಳಲ್ಲಿ ಪದಕಗಳನ್ನು ಗೆದ್ದಿದ್ದಾರೆ.