alex Certify BIG NEWS: ಮಹಿಳಾ ವಿಶ್ವಕಪ್ ಕ್ರಿಕೆಟ್; ರಾಜೇಶ್ವರಿಗೆ 4 ವಿಕೆಟ್, ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಹಿಳಾ ವಿಶ್ವಕಪ್ ಕ್ರಿಕೆಟ್; ರಾಜೇಶ್ವರಿಗೆ 4 ವಿಕೆಟ್, ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಮೌಂಟ್ ಮಾಂಗನೂಯಿ: ನ್ಯೂಜಿಲೆಂಡ್ ಬೇ ಓವಲ್ ಮೈದಾನದಲ್ಲಿ ನಡೆದ ಮಹಿಲಾ ವಿಶ್ವಕಪ್ ಕ್ರಿಕೆಟ್ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ವನಿತೆಯರ ತಂಡ ಗೆಲುವು ಕಂಡಿದೆ.

ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತಕ್ಕೆ 107 ರನ್ ಜಯ ದೊರೆತಿದೆ. ವಿಜಯಪುರದ ರಾಜೇಶ್ವರಿ ಗಾಯಕವಾಡ 4 ವಿಕೆಟ್ ಪಡೆದುಕೊಂಡಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿತು. ಸ್ಮೃತಿ ಮಂದಾನ 52, ದೀಪ್ತಿ ಶರ್ಮ 40, ಎಸ್. ರಮಾ 53, ಪೂಜಾ 67 ರನ್ ಗಳಿಸಿದರು.

245 ಗೆಲುವಿನ ಗುರಿ ಪಡೆದ ಪಾಕಿಸ್ತಾನ 43 ಓವರುಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 137 ರನ್ ಗಳಿಸಿತು ಭಾರತದ ಪರವಾಗಿ ರಾಜೇಶ್ವರಿ ಗಾಯಕವಾಡ 4, ಜೂಲನ್ ಗೋಸ್ವಾಮಿ 2, ರಮಾ 2 ವಿಕೆಟ್ ಪಡೆದರು.

ಭಾರತ 244/7(50 ಓವರ್), ಪಾಕಿಸ್ತಾನ 137/10(43 ಓವರ್)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...