ಕೊಲ್ಕೊತ್ತಾ: ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಭಾರತ 17 ರನ್ ಜಯಗಳಿಸಿದೆ. ಮೂರು ಪಂದ್ಯಗಳ ಸರಣಿಯನ್ನು 3 -0 ಅಂತರದಲ್ಲಿ ರೋಹಿತ್ ಶರ್ಮಾ ಬಳಗ ಕ್ಲೀನ್ ಸ್ವೀಪ್ ಮಾಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 5 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿದ್ದು, ಭಾರತದ ಪರವಾಗಿ ಸೂರ್ಯಕುಮಾರ್ ಯಾದವ್ 65, ವೆಂಕಟೇಶ್ ಐಯ್ಯರ್ ಅಜೇಯ 35, ಶ್ರೇಯಸ್ 25, ಕಿಶನ್ 34 ರನ್ ಗಳಿಸಿದರು.
ವೆಸ್ಟ್ ಇಂಡೀಸ್ 20 ಓವರ್ 9 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿ ಸೋಲು ಕಂಡಿದೆ. ಪೂರನ್ 61, ಪೊವೆಲ್ 25, ಶೆಫರ್ಡ್ 29 ರನ್ ಗಳಿಸಿದರು. ಸೂರ್ಯಕುಮಾರ್ ಪಂದ್ಯ ಶ್ರೇಷ್ಠ ಮತ್ತು ಶ್ರೇಷ್ಠ ಪುರಸ್ಕೃತರಾದರು.
ಭಾರತ 15 ಓವರ್ ವರೆಗೆ 98 ರನ್ ಗಳಿಸಿದ್ದು, ಕೊನೆಯ 5 ಓವರ್ ಗಳಲ್ಲಿ 86 ರನ್ ಗಳಿಸಿ ದಾಖಲೆ ಬರೆದಿದೆ. ಟಿ20 ಕ್ರಿಕೆಟ್ ನಲ್ಲಿ ಭಾರತ 16 ರಿಂದ 20 ಓವರ್ ಗಳಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆ ಇದಾಗಿದೆ.