ತರೌಬಾ: ಇಲ್ಲಿನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 68 ರನ್ ಗಳ ಜಯ ದಾಖಲಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಭಾರತ 1 -0 ಮುನ್ನಡೆ ಸಾಧಿಸಿದೆ.
ಏಕದಿನ ಸರಣಿಯ ವಿಶ್ರಾಂತಿ ನಂತರ ತಂಡಕ್ಕೆ ಮರಳಿದ ನಾಯಕ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 64 ರನ್ ಗಳಿಸಿದ್ದಾರೆ. ದಿನೇಶ್ ಕಾರ್ತಿಕ್ ಅಜೇಯ 41 ರನ್ ಗಳಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 190 ರನ್ ಗಳಿಸಿತು. ರೋಹಿತ್ ಶರ್ಮಾ 64, ಸೂರ್ಯಕುಮಾರ್ ಯಾದವ್ 24, ಶ್ರೇಯಸ್ ಅಯ್ಯರ್ 0, ರಿಷಬ್ ಪಂತ್ 14, ಹಾರ್ದಿಕ್ ಪಾಂಡ್ಯ 1, ರವೀಂದ್ರ ಜಡೇಜ 16, ದಿನೇಶ್ ಕಾರ್ತಿಕ್ ಅಜೇಯ 41, ರವಿಚಂದ್ರನ್ ಅಶ್ವಿನ್ ಅಜೇಯ 13 ರನ್ ಗಳಿಸಿದರು. ವಿಂಡಿಸ್ ಪರವಾಗಿ ಒಬೆಡ್ ಮೆಕಾಯ್, ಜೇಸನ್ ಹೋಲ್ಡರ್, ಅಖಿಲ್ ಹೊಸೇನ್, ಕೀಮೋ ಪೋಲ್ ತಲಾ 1 ವಿಕೆಟ್ ಹಾಗೂ ಅಲ್ಜಾರಿ ಜೋಸೆಫ್ 2 ವಿಕೆಟ್ ಪಡೆದರು.
ಗೆಲುವಿನ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 122 ರನ್ ಗಳಿಸಿತು. ಕೈಲ್ ಮೇಯರ್ಸ್ 15, ಶಮ್ರಾ ಬ್ರೂಕ್ಸ್ 20, ಜೇಸನ್ ಹೋಲ್ಡರ್ 0, ನಿಕೊಲಸ್ ಪೊರಾನ್ 18, ರಾವ್ ಮನ್ ಪೊವೆಲ್ 14, ಶಿಮ್ರಾನ್ ಹೆಟ್ಮಯರ್ 14, ಅಕೆಲ್ ಹೊಸೆನ್ 11, ಒಡೆನ್ ಸ್ಮಿತ್ 0, ಕೀಮೋ ಪೊಲ್ ಅಜೇಯ 19, ಅಲ್ಜಾರಿ ಜೋಸೆಫ್ ಅಜೇಯ 5 ರನ್ ಗಳಿಸಿದರು. ಭಾರತದ ಪರವಾಗಿ ಭುವನೇಶ್ವರ್ ಕುಮಾರ್ 1, ಅರ್ಷ್ ದೀಪ್ ಸಿಂಗ್ 2, ರವೀಂದ್ರ ಜಡೇಜ 1, ರವಿಚಂದ್ರನ್ ಅಶ್ವಿನ್ 2, ರವಿ ಬಿಷ್ಣೊಯಿ 2 ವಿಕೆಟ್ ಪಡೆದರು.