ದುಬೈ: ಭಾರತ ಅಂಡರ್ 19 ಏಷ್ಯಾಕಪ್ ಜಯಿಸಿದೆ. ಶ್ರೀಲಂಕಾ ವಿರುದ್ಧ ಭಾರತ ಜಯಭೇರಿ ಬಾರಿಸುವದರೊಂದಿಗೆ ಅಂಡರ್ 19 ಏಷ್ಯಾಕಪ್ 2021 ಚಾಂಪಿಯನ್ ಆಗಿದೆ.
ಭಾರತ 9 ವಿಕೆಟ್ ಗಳಿಂದ ಶ್ರೀಲಂಕಾ ವಿರುದ್ಧ ಭರ್ಜರಿ ಜಯ ಗಳಿಸುವ ಮೂಲಕ ಎಂಟನೇ ಬಾರಿಗೆ ಅಂಡರ್ 19 ಏಷ್ಯಾಕಪ್ ಜಯಿಸಿದೆ. ದುಬೈನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಜಯಭೇರಿ ಬಾರಿಸಿದೆ.
ಶುಕ್ರವಾರ ದುಬೈನಲ್ಲಿ ನಡೆದ ಫೈನಲ್ ನಲ್ಲಿ ಶ್ರೀಲಂಕಾವನ್ನು 9 ವಿಕೆಟ್ಗಳಿಂದ ಸೋಲಿಸಿದ ಭಾರತ U-19 ಏಷ್ಯಾಕಪ್ನಲ್ಲಿ ದಾಖಲೆಯ ಎಂಟನೇ ಪ್ರಶಸ್ತಿಯೊಂದಿಗೆ ತನ್ನ ಪಾರಮ್ಯ ಮೆರೆದಿದೆ. ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರೀ ಮಳೆ ಸುರಿದು ಎರಡು ಗಂಟೆಗಳಿಗೂ ಹೆಚ್ಚು ಕಾಲ ಆಟವನ್ನು ನಿಲ್ಲಿಸಿದಾಗ 33 ಓವರ್ಗಳಲ್ಲಿ 7 ವಿಕೆಟ್ಗೆ 74 ರನ್ ಗಳಿಸಿದ ಶ್ರೀಲಂಕಾ ಸಂಕಷ್ಟಕ್ಕೆ ಸಿಲುಕಿ ಭಾರತದತ್ತ ಮೊದಲೇ ಪಂದ್ಯ ವಾಲಿತ್ತು. ಭಾರತಕ್ಕೆ ಡಿಎಲ್ಎಸ್ ವಿಧಾನದ ಮೂಲಕ 38 ಓವರ್ಗಳಲ್ಲಿ 102 ರನ್ಗಳ ಪರಿಷ್ಕೃತ ಗುರಿಯನ್ನು ನಿಗದಿಪಡಿಸಲಾಯಿತು, 21.3 ಓವರ್ಗಳಲ್ಲಿ ಆರಾಮವಾಗಿ ಗುರಿ ತಲುಪಿದ ಭಾರತ ಗೆಲುವು ಕಂಡಿದೆ, ಆರಂಭಿಕ ಆಂಗ್ಕ್ರಿಶ್ ರಘುವಂಶಿ 67 ಎಸೆತಗಳಲ್ಲಿ ಅಜೇಯ 56 ರನ್ ಗಳಿಸಿದರು.
ಸ್ಕೋರ್ ವಿವರ:
ಶ್ರೀಲಂಕಾ 106/9(38 ಓವರ್), ಭಾರತ 104/1(21.3) –ಡಕ್ ವರ್ತ್ ಲೂಯಿಸ್ ನಿಯಮದನ್ವಯ ಭಾರತ ಜಯಿಸಿದೆ.