ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಮುಖಿಯಾಗಿವೆ.
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪರ ಆರಂಭಿಕ ಆಟಗಾರರಾದ ಕೆ.ಎಲ್. ರಾಹುಲ್ ಮತ್ತು ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ಕೆ.ಎಲ್. ರಾಹುಲ್ 28, ರೋಹಿತ್ ಶರ್ಮಾ 28, ವಿರಾಟ್ ಕೊಹ್ಲಿ 60, ಸೂರ್ಯಕುಮಾರ್ ಯಾದವ್ 13, ರಿಷಬ್ ಪಂತ್ 14, ಹಾರ್ದಿಕ್ ಪಾಂಡ್ಯ 0, ದೀಪಕ್ ಹೂಡಾ 16, ಭುವನೇಶ್ವರ್ ಕುಮಾರ್ ಅಜೇಯ 0, ರವಿ ಬಿಷ್ಣೋಯಿ ಅಜೇಯ 8 ರನ್ ಗಳಿಸಿದ್ದು, ಭಾರತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿದೆ.
ಪಾಕಿಸ್ತಾನ ಪರವಾಗಿ ಶಾದಾಬ್ ಖಾನ್ 2, ಮೊಹಮ್ಮದ್ ನವಾಜ್, ಹ್ಯಾರಿಸ್ ರವೂಫ್, ಮೊಹಮ್ಮದ್ ಹನ್ಸಾನ್, ನಸೀಂ ಶಾ ತಲಾ 1 ವಿಕೆಟ್ ಪಡೆದರು.
ಕಳೆದ ಭಾನುವಾರ ಎ ಗುಂಪಿನ ಲೀಗ್ ಹಂತದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 5 ವಿಕೆಟ್ ಗಳ ಅಂತರದಿಂದ ಭಾರತ ಸೋಲಿಸಿತ್ತು.