ಎಡ್ಗ್ ಬಾಸ್ಟನ್: ಬರ್ಮಿಂಗ್ ಹ್ಯಾಂನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಸ್ಮೃತಿ ಮಂಧಾನ ಅರ್ಧಶತಕ ಸಿಡಿಸುವುದರೊಂದಿಗೆ ಭಾರತ ವನಿತೆಯರು ಪಾಕಿಸ್ತಾನದ ಮಹಿಳೆಯರನ್ನು 8 ವಿಕೆಟ್‌ಗಳಿಂದ ಸೋಲಿಸಿದರು.
ಸಿಡಬ್ಲ್ಯೂಜಿ -2022 ಬರ್ಮಿಂಗ್ ಹ್ಯಾಮ್ ನಲ್ಲಿ ಭಾರತ ಮೊದಲ ಜಯವನ್ನು ದಾಖಲಿಸಿದೆ. ಮಳೆಯಿಂದಾಗಿ ಪಂದ್ಯವನ್ನು 18 ಓವರ್‌ಗಳಿಗೆ ಇಳಿಸಲಾಗಿತ್ತು.
ಕಾಮನ್ವೆಲ್ತ್ ಗೇಮ್ಸ್ ಟಿ20 ಪಂದ್ಯದಲ್ಲಿ ಭಾರತಕ್ಕೆ ಜಯ ಸಿಕ್ಕಿದೆ. ಭಾರತದ ವನಿತೆಯರ ತಂಡ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಪಾಕಿಸ್ತಾನ ವನಿತೆಯರ ತಂಡ 18 ಓವರ್ ಗಳಲ್ಲಿ 99 ರನ್ ಗಳಿಸಿದ್ದು, ಭಾರತದ ವನಿತೆಯರು 11.4 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿದ್ದಾರೆ.
ಸ್ಮೃತಿ ಮಂಧಾನ 42 ಎಸೆತಗಳಲ್ಲಿ ಅಜೇಯ 63 ರನ್ ಸಿಡಿಸಿದ್ದಾರೆ. ಸ್ನೇಹ ರಾಣಾ ಮತ್ತು ರಾಧಾ ಯಾದವ್ ಕ್ರಮವಾಗಿ ಎರಡು ವಿಕೆಟ್‌ಗಳನ್ನು ಪಡೆದರು. ಪಾಕ್ ನ ಮುನೀಬಾ ಅಲಿ 30 ಎಸೆತಗಳಲ್ಲಿ 32 ರನ್ ಗಳಿಸಿ ಗರಿಷ್ಠ ಸ್ಕೋರ್ ಮಾಡಿದರು.ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಜಯದ ಖಾತೆ ತೆರೆದಿದೆ.