ಭಾರತ, ನ್ಯೂಜಿಲೆಂಡ್ ಮಧ್ಯೆ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಡ್ರಾನತ್ತ ಸಾಗ್ತಿದೆ. ಸೌತಾಂಪ್ಟನ್ ಹವಾಮಾನ ಕೈಕೊಟ್ಟಿದೆ. ಮಳೆಯಿಂದಾಗಿ ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚಿದೆ. ಪಂದ್ಯ ಡ್ರಾ ಆದಲ್ಲಿ ಉಭಯ ತಂಡಗಳನ್ನು ವಿಜೇತ ತಂಡಗಳೆಂದು ಘೋಷಿಸಲಾಗುವುದು.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಡ್ರಾ ಆದಲ್ಲಿ ಭಾರತಕ್ಕೆ ದೊಡ್ಡ ನಷ್ಟವಾಗಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯ ಡ್ರಾ ಆದಲ್ಲಿ ಭಾರತವು 122 ರೇಟಿಂಗ್ ಪಾಯಿಂಟ್‌ಗಳನ್ನು ಪಡೆಯಲಿದೆ. ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿರಲಿದೆ. ನ್ಯೂಜಿಲೆಂಡ್ 123 ರೇಟಿಂಗ್ ನೊಂದಿಗೆ ಮೊದಲ ಸ್ಥಾನದಲ್ಲೇ ಉಳಿಯಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯವನ್ನು ಭಾರತ ಗೆದ್ದಿದ್ದರೆ ಚಾಂಪಿಯನ್ ಟ್ರೋಫಿಯನ್ನು ನ್ಯೂಜಿಲೆಂಡ್‌ನೊಂದಿಗೆ ಹಂಚಿಕೊಳ್ಳಬೇಕಾಗಿಲ್ಲ. ಜೊತೆಗೆ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಭಾರತ 124 ರೇಟಿಂಗ್ ಗಳಿಸಿ ಪ್ರಥಮ ಸ್ಥಾನ ಗಳಿಸಲಿತ್ತು. 121 ರೇಟಿಂಗ್ ನೊಂದಿಗೆ ನ್ಯೂಜಿಲೆಂಡ್ ಎರಡನೇ ಸ್ಥಾನಕ್ಕೆ ಇಳಿಯುತ್ತಿತ್ತು.
ಒಂದು ವೇಳೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯವನ್ನು ನ್ಯೂಜಿಲೆಂಡ್ ಗೆದ್ದಿದ್ದರೆ ತಂಡ 126 ಅಂಕ ಪಡೆದು ಅಗ್ರ ಸ್ಥಾನದಲ್ಲಿ ಉಳಿಯಲಿತ್ತು. ಟೀಮ್ ಇಂಡಿಯಾ 120 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿಯೇ ಇರಬೇಕಾಗಿತ್ತು. ಅಂತಿಮ ಪಂದ್ಯ ಡ್ರಾ ಆದ್ರೂ ನ್ಯೂಜಿಲೆಂಡ್‌ಗೆ ಯಾವುದೇ ನಷ್ಟವಿಲ್ಲ. ನ್ಯೂಜಿಲ್ಯಾಂಡ್ 123 ಅಂಕದೊಂದಿಗೆ ಮೊದಲ ಸ್ಥಾನದಲ್ಲಿಯೇ ಇರಲಿದೆ.