ಜೈಪುರ: ಜೈಪುರದ ಸವಾಯ್ ಮಾನಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಟಿ20 ಪಂದ್ಯದಲ್ಲಿ ಭಾರತ 5 ವಿಕೆಟ್ ಜಯಗಳಿಸಿದೆ.
ಭಾರತ ಟಿ20 ತಂಡದ ನಾಯಕ ರೋಹಿತ್ ಶರ್ಮ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಮೊದಲ ಪಂದ್ಯದಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದೆ. ಗಪ್ಟಿಲ್ 70, ಮಾರ್ಕ್ ಚಾಪ್ಶನ್ 63 ರನ್ ಗಳಿಸಿದರು. ಭಾರತದ ಪರ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಭುವನೇಶ್ವರ್ ಕುಮಾರ್ 2, ಆರ್. ಅಶ್ವಿನ್ 2 ಹಾಗೂ ದೀಪಕ್ ಚಹರ್ ಮತ್ತು ಮೊಹಮ್ಮದ್ ಸಿರಾಜ್ ತಲಾ 1 ವಿಕೆಟ್ ಪಡೆದರು.
ಗೆಲುವಿನ ಗುರಿ ಬೆನ್ನತ್ತಿದ ಭಾರತ ಕೊನೆಯ ಓವರ್ ನಲ್ಲಿ ಜಯಗಳಿಸಿದೆ. 19.4 ಓವರುಗಳಲ್ಲಿ 5 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿ ಮೊದಲ ಪಂದ್ಯ ಗೆದ್ದಿದೆ. ಕೆ.ಎಲ್. ರಾಹುಲ್ 15, ರೋಹಿತ್ ಶರ್ಮ 48, ಸೂರ್ಯಕುಮಾರ್ 62, ರಿಷಬ್ ಪಂತ್ ಅಜೇಯ 17 ರನ್ ಗಳಿಸಿದರು. ತಮ್ಮ ಕೋಚಿಂಗ್ ಸ್ಟೈಲ್ ಎಲ್ಲರಿಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ರಾಹುಲ್ ದ್ರಾವಿಡ್ ಸಾಬೀತುಪಡಿಸಿದ್ದಾರೆ.