ಚೆನ್ನೈನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ದಾಖಲೆ ಬರೆದಿದ್ದಾರೆ. 114 ವರ್ಷಗಳಿಂದ ಯಾವ ಬೌಲರ್ ಮಾಡದ ದಾಖಲೆ ಮಾಡಿದ್ದಾರೆ. ಇಂಗ್ಲೆಂಡ್ ನ ಎರಡನೇ ಇನ್ನಿಂಗ್ಸ್ ನಲ್ಲಿ ಅಶ್ವಿನ್ ಇನ್ನಿಂಗ್ಸ್ ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದಿದ್ದಾರೆ.
ಅಶ್ವಿನ್, ರೋರಿ ಬರ್ನ್ಸ್ ವಿಕೆಟ್ ಪಡೆದ್ರು. ಇದರೊಂದಿಗೆ ಅಶ್ವಿನ್ , ಟೆಸ್ಟ್ ಇನ್ನಿಂಗ್ಸ್ ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದ ವಿಶ್ವದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 114 ವರ್ಷಗಳ ನಂತರ ಇದು ನಡೆದಿದೆ. ಇದಕ್ಕೂ ಮೊದಲು 1888 ರಲ್ಲಿ ಬಾಬಿ ಪೀಲ್ ಮತ್ತು 1907 ರಲ್ಲಿ ಬರ್ಟ್ ವೋಲ್ಗರ್ ಈ ಸಾಧನೆ ಮಾಡಿದ್ದರು. ಈಗ ಈ ಬೌಲರ್‌ಗಳ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್ ಕೂಡ ಸೇರಿದ್ದಾರೆ.
ಇಲ್ಲಿದೆ ವಿಶ್ವದ ಅತಿ ತೆಳುವಾದ ಕಟ್ಟಡ…..!
ಮೊದಲನೆಯದಾಗಿ 1888 ರಲ್ಲಿ ಇಂಗ್ಲೆಂಡ್ ಸ್ಪಿನ್ನರ್ ಬಾಬಿ ಪೀಲ್ ಇನ್ನಿಂಗ್ಸ್ ಮೊದಲ ಎಸೆತದಲ್ಲಿ ಆಸ್ಟ್ರೇಲಿಯಾದ ಅಲೆಕ್ ಬ್ಯಾನರ್ಮನ್ ಔಟ್ ಮಾಡಿದ್ದರು. 1907 ರಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಬರ್ಟ್ ವೋಗ್ಲರ್ ಈ ದಾಖಲೆ ಬರೆದಿದ್ದರು.