
ಕೊರೊನಾ ವೈರಸ್‌ನಿಂದಾಗಿ ಟೀಮ್ ಇಂಡಿಯಾದ ಮತ್ತೊಂದು ಸರಣಿಯನ್ನು ಮುಂದೂಡಲಾಗಿದೆ. ಭಾರತ, ಇಂಗ್ಲೆಂಡ್ ನಡುವೆ ನಡೆಯಬೇಕಿದ್ದ ಏಕದಿನ ಮತ್ತು ಟಿ 20 ಸರಣಿಯನ್ನು ಮುಂದೂಡಲಾಗಿದೆ. ಸೆಪ್ಟೆಂಬರ್ ಅಂತ್ಯದಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕೆ ಬರಬೇಕಿತ್ತು. ಆದರೆ ಕೊರೊನಾ ವೈರಸ್ ಕಾರಣ ಬಿಸಿಸಿಐ ಮತ್ತು ಇಸಿಬಿ ಪರಸ್ಪರ ಒಪ್ಪಂದದ ಮೂಲಕ ಸರಣಿಯನ್ನು ಮುಂದೂಡಿದೆ.
ಬಿಸಿಸಿಐ ಮಾಹಿತಿಯ ಪ್ರಕಾರ, ಈ ಸರಣಿಯನ್ನು 2021ರವರೆಗೆ ಮುಂದೂಡಲಾಗಿದೆ. ಕೊರೊನಾ ಕಾರಣಕ್ಕೆ ಅನೇಕ ಕ್ರಿಕೆಟ್ ಸರಣಿಗಳು ರದ್ದಾಗಿವೆ. ಐಸಿಸಿಯ ಟಿ 20 ವಿಶ್ವಕಪ್ ಮತ್ತು ಏಷ್ಯಾ ಕಪ್ ಅನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.
ಸೆಪ್ಟೆಂಬರ್ 19 ರಿಂದ ಐಪಿಎಲ್ ಪಂದ್ಯ ನಡೆಯಲಿದೆ.ಇದಕ್ಕಾಗಿಯೇ ಭಾರತ-ಇಂಗ್ಲೆಂಡ್ ಸರಣಿಯನ್ನು ಮುಂದೂಡಲಾಗುತ್ತಿದೆ. ಕೊರೊನಾ ವೈರಸ್‌ನಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಬೇಕಿದ್ದ ಏಕದಿನ ಮತ್ತು ಟಿ 20 ಸರಣಿಯನ್ನು ಮುಂದೂಡಲಾಗಿದೆ. ಇದಲ್ಲದೆ ಶ್ರೀಲಂಕಾ ಪ್ರವಾಸವನ್ನೂ ಮುಂದೂಡಲಾಗಿದೆ.