ಭಾರತದ ವಿರುದ್ಧ ನಾಲ್ಕನೇ ಹಾಗೂ ಕೊನೆ ಟೆಸ್ಟ್ ಪಂದ್ಯದಲ್ಲಿ ಅಚಾನಕ್ ಇಂಗ್ಲೆಂಡ್ ಆಟಗಾರರ ತೂಕದಲ್ಲಿ ಇಳಿಕೆಯಾಗಿತ್ತು ಎಂದು ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಬಹಿರಂಗಪಡಿಸಿದ್ದಾರೆ. ಆಟಗಾರರು ಹೊಟ್ಟೆ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಬೆನ್ ಸ್ಟೋಕ್ಸ್ ಹೇಳಿದ್ದಾರೆ.
ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ಬೆನ್ ಸ್ಟೋಕ್ಸ್, ಆಟಗಾರರು ಇಂಗ್ಲೆಂಡ್ ಗೆ ಬದ್ಧರಾಗಿದ್ದಾರೆ. ಹಿಂದಿನ ವಾರ ಇದನ್ನು ನೋಡುವ ಅವಕಾಶ ಸಿಕ್ಕಿತ್ತು. ಆದ್ರೆ ಕೆಲ ಆಟಗಾರರು ಅನಾರೋಗ್ಯಕ್ಕೊಳಗಾಗಿದ್ದರು. 41 ಡಿಗ್ರಿ ತಾಪಮಾನದಲ್ಲಿ ಆಟವಾಡುವುದು ವಾಸ್ತವಿಕವಾಗಿ ಕಷ್ಟವೆಂದು ಬೆನ್ ಸ್ಟೋಕ್ಸ್ ಹೇಳಿದ್ದಾರೆ.
ಒಂದು ವಾರದಲ್ಲಿ ನಾನು 5 ಕೆ.ಜಿ ತೂಕ ಇಳಿದಿದ್ದೇನೆಂದು ಬೆನ್ ಸ್ಟೋಕ್ಸ್ ಹೇಳಿದ್ದಾರೆ. ಡೊಮ್ ಸಿಬ್ಲಿ 4 ಕೆ.ಜಿ ಮತ್ತು ಜಿಮ್ಮಿ ಆಂಡರ್ಸನ್ 3 ಕೆ.ಜಿ ಇಳಿದಿದ್ದಾರೆಂದು ಬೆನ್ ಸ್ಟೋಕ್ಸ್ ಹೇಳಿದ್ದಾರೆ. ಜ್ಯಾಕ್ ಲೀಚ್,ಶೌಚಾಲಯದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರು ಎಂದು ಬೆನ್ ಸ್ಟೋಕ್ಸ್ ಹೇಳಿದ್ದಾರೆ. ಸೋತ ನಂತ್ರ ನೀಡ್ತಿರುವ ಕಾರಣ ಇದಲ್ಲವೆಂದು ಬೆನ್, ಇಂಗ್ಲೆಂಡ್ ಆಟವನ್ನು ಟೀಕಿಸಿದ್ದವರಿಗೆ ಉತ್ತರ ನೀಡಿದ್ದಾರೆ. ಎಲ್ಲರೂ ತಂಡಕ್ಕೆ ಆಡಲು ಸಿದ್ಧವಾಗಿದ್ದರು. ರಿಷಬ್ ಪಂತ್ ಉತ್ತಮ ಆಟವಾಡಿದ್ರು. ತಮ್ಮ ಆಟಗಾರರು ಕೂಡ ಇಂಗ್ಲೆಂಡ್ ಗೆಲುವಿಗೆ ಪ್ರಯತ್ನಿಸಿದ್ರು ಎಂದು ಬೆನ್ ಸ್ಟೋಕ್ಸ್ ಹೇಳಿದ್ದಾರೆ.