
ಸಿಡ್ನಿಯಲ್ಲಿ ನಡೆದ ಮೊದಲ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದೆ.
ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಅತಿವೇಗವಾಗಿ ಒಂದು ಸಾವಿರ ರನ್ ಪೂರೈಸಿದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಹೊಸ ದಾಖಲೆ ಬರೆದಿದ್ದಾರೆ.
ಇಂದಿನ ಪಂದ್ಯದಲ್ಲಿ 76 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್ ಸಿಡಿಸಿದ ಅವರು 90 ರನ್ ಗಳಿಸಿದ್ದಾರೆ. ಅಂತರರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 857 ಎಸೆತಗಳನ್ನು ಎದುರಿಸಿ 1000 ಪೂರೈಸಿದ್ದಾರೆ. ಈ ಮೂಲಕ ವಿಶ್ವದಲ್ಲೇ ಅತಿ ವೇಗವಾಗಿ 1000 ರನ್ ಗಡಿ ದಾಟಿದ ವಿಶ್ವದ 5 ನೇ ಆಟಗಾರರಾಗಿದ್ದಾರೆ.
ವೆಸ್ಟ್ ಇಂಡೀಸ್ ನ ಆಂಡ್ರೆ ರಸೆಲ್ 787 ಎಸೆತ, ನ್ಯೂಜಿಲೆಂಡ್ ನ ಲುಕೆ ರೋಂಚಿ 807 ಎಸೆತಗಳಲ್ಲಿ ಸಹಸ್ರ ರನ್ ಗಳಿಸಿದ್ದಾರೆ. ಪಾಕಿಸ್ತಾನದ ಶಾಹಿದ್ ಅಫ್ರಿದಿ 834 ಬಾಲ್ ಗಳಲ್ಲಿ 1 ಸಾವಿರ ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್ ನ ಕೊರಿ ಆಂಡರ್ಸನ್ 854 ಎಸೆತಗಳಲ್ಲಿ ಸಾವಿರ ರನ್ ಗಳಿಸಿದ್ದಾರೆ.