ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ 8 ವರ್ಷದ ನಂತರ ಕ್ರಿಕೆಟ್ ಪಂದ್ಯ ನಡೆಯುವ ಸಾಧ್ಯತೆಯಿದೆ. ಈ ವರ್ಷ ಟಿ20 ಸರಣಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ.
ಗಡಿಯಲ್ಲಿ ಕದನವಿರಾಮ ಘೋಷಣೆಯಾದ ನಂತರ ಕ್ರಿಕೆಟ್ ಪಂದ್ಯ ಆಯೋಜನೆ ಬಗ್ಗೆ ಚರ್ಚೆ ನಡೆದಿದೆ. 2012 -13ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ನಡೆದಿತ್ತು. ಅದಾಗಿ 8 ವರ್ಷಗಳ ನಂತರ ಇದೇ ಮೊದಲ ಬಾರಿಗೆ ದ್ವೀಪಕ್ಷೀಯ ಟಿ20 ಸರಣಿಯಲ್ಲಿ ಭಾರತ ಮತ್ತು ಪಾಕ್ ಮುಖಾಮುಖಿಯಾಗಲಿವೆ ಎಂದು ಹೇಳಲಾಗಿದ್ದು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಪಾಕ್ ಸರ್ಕಾರದ ಅಧಿಕಾರಿಗಳು ಈ ಬಗ್ಗೆ ಸೂಚನೆ ನೀಡಿದ್ದಾರೆ.
ಟಿ-ಟ್ವೆಂಟಿ ವಿಶ್ವಕಪ್ ಗೆ ಮೊದಲು ಭಾರತ ಮತ್ತು ಪಾಕ್ ನಡುವೆ ಟಿ-ಟ್ವೆಂಟಿ ಪಂದ್ಯಾವಳಿ ನಡೆಯಲಿದೆ. ಭಾರತದಲ್ಲಿಯೂ ಇದಕ್ಕೆ ಪೂರಕವಾದ ಬೆಳವಣಿಗೆ ನಡೆದಿವೆ ಎನ್ನಲಾಗಿದೆ.