ಇಂಗ್ಲೆಂಡ್ ವಿರುದ್ಧದ ಎರಡನೇ ಟಿ-20 ಪಂದ್ಯದ ವೇಳೆ ನಿಧಾನಗತಿಯ ಓವರ್‌ರೇಟ್‌ನಲ್ಲಿ ಬೌಲಿಂಗ್ ಮಾಡಿದ ಕಾರಣಕ್ಕೆ ಭಾರತ ತಂಡದ ಎಲ್ಲಾ ಆಟಗಾರರಿಗೆ ಪಂದ್ಯದ ಶುಲ್ಕದ 20% ದಂಡ ವಿಧಿಸಲಾಗಿದೆ.
ಅಹಮದಾಬಾದ್‌ನಲ್ಲಿ ನಡೆದ ಪಂದ್ಯದ ವೇಳೆ ಭಾರತೀಯ ಆಟಗಾರರ ನಿಧಾನಗತಿಯ ಆಟದ ಕಾರಣದಿಂದ ಐಸಿಸಿ ಮ್ಯಾಚ್ ರೆಫ್ರೀ ಜಾವಗಲ್ ಶ್ರೀನಾಥ್ ವಿರಾಟ್ ಪಡೆಯ ಮೇಲೆ ಈ ದಂಡ ವಿಧಿಸಿದ್ದಾರೆ.
ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ…!
“ಆಟಗಾರರ ಹಾಗೂ ಸಹಾಯಕ ಸಿಬ್ಬಂದಿಯ ವರ್ತನೆ ಸಂಬಂಧ ಐಸಿಸಿ ನಿಯಮಾವಳಿಯ 2.22ನೇ ವಿಧಿ ಅನ್ವಯ, ಪಂದ್ಯಕ್ಕೆ ನಿಗದಿಪಡಿಸಿದ ಅವಧಿಯಲ್ಲಿ ಕನಿಷ್ಠ ಓವರ್ ರೇಟ್ ಕಾಪಾಡಿಕೊಳ್ಳದೇ ಇದ್ದಲ್ಲಿ, ಆಟಗಾರರಿಗೆ ಪಂದ್ಯದ ಶುಲ್ಕದ 20 ಪ್ರತಿಶತ ದಂಡ ವಿಧಿಸುವ ಅವಕಾಶವಿದೆ,” ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.
“ಕೊಹ್ಲಿ ತಪ್ಪೊಪ್ಪಿಕೊಂಡಿದ್ದು, ಕೊಟ್ಟಿರುವ ಶಿಕ್ಷೆಯನ್ನು ಒಪ್ಪಿದ್ದಾರೆ, ಹೀಗಾಗಿ ಯಾವುದೇ ಅಧಿಕೃತ ಆಲಿಕೆಯ ಅಗತ್ಯವಿಲ್ಲ,” ಎಂದು ಐಸಿಸಿ ತಿಳಿಸಿದೆ.