ಹರಾರೆಯಲ್ಲಿ ನಡೆದ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಭಾರತ ತಂಡ 5 ವಿಕೆಟ್ ಗಳಿಂದ ಸೋಲಿಸಿದೆ.
ಇದಕ್ಕೂ ಮೊದಲು ಟಾಸ್ ಗೆದ್ದ ಪ್ರವಾಸಿಗರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆತಿಥೇಯರು 162 ರನ್‌ಗಳ ಗುರಿಯನ್ನು ಹೊಂದಿದ್ದರು. ಭಾರತ ತಂಡ 146 ಎಸೆತಗಳು ಬಾಕಿ ಇರುವಂತೆಯೇ ಗುರಿ ಸಾಧಿಸಿತು. ಸಂಜು ಸ್ಯಾಮ್ಸನ್ 39 ಎಸೆತಗಳಲ್ಲಿ 43 ರನ್ ಗಳಿಸಿ ಅಗ್ರ ಸ್ಕೋರರ್ ಆಗಿ ಉಳಿದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಜಿಂಬಾಬ್ವೆ 38.1 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 161 ರನ್ ಗಳಿಸಿತು. ಇನ್ನೊಸೆಂಟ್ ಕೈಯಾ 16, ಸಿಕಂದರ್ ರಜಾ 16, ಸಿಯಾನ್ ವಿಲಿಯಮ್ಸ್ 42, ರ್ಯಾನ್ ಬರ್ಲ್ 39 ರನ್ ಗಳಿಸಿದರು. ಭಾರತದ ಪರ ಶಾರ್ದೂಲ್ ಠಾಕೂರ್ ಮೂರು ವಿಕೆಟ್ ಪಡೆದರು.
ಭಾರತದ ಪರವಾಗಿ ಶಿಖರ ಧವನ್ 33, ಶುಭಮನ್ ಗಿಲ್ 33, ದೀಪಕ್ ಹೂಡಾ 25, ಸಂಜು ಸ್ಯಾಮ್ಸನ್ ಅಜೇಯ 43 ರನ್ ಗಳಿಸಿದರು. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿದೆ.
ಜಿಂಬಾಬ್ವೆ ಕ್ರಿಕೆಟ್ ಇಂದಿನ ಪಂದ್ಯವನ್ನು ಮಕ್ಕಳ ಕ್ಯಾನ್ಸರ್ ಕಾರಣಕ್ಕೆ ಮೀಸಲಿಟ್ಟಿದೆ. ಅವರು ಆರು ವರ್ಷದ ಮಗುವಿಗೆ 500 ಡಾಲರ್ ಮತ್ತು ಜಿಂಬಾಬ್ವೆ ಜೆರ್ಸಿಯನ್ನು ದಾನ ಮಾಡಿದರು. ಅವರಿಗೆ ಪಂದ್ಯಶ್ರೇಷ್ಠ ಸಂಜು ಸ್ಯಾಮ್ಸನ್ ಅವರಿಂದ ಸಹಿ ಮಾಡಿದ ಚೆಂಡನ್ನು ಸಹ ನೀಡಲಾಯಿತು.