ಅಹಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕದಿನ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಗಳಿಸಿದೆ.
ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 43.5 ಓವರುಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 176 ರನ್ ಗಳಿಸಿತ್ತು. ಬ್ರಂಡನ್ ಕಿಂಗ್ 13, ಡರೇನ್ ಬ್ರಾವೊ 18, ಶಾಮ್ ರಹ ಬ್ರೂಕ್ಸ್ 12, ನಿಕೋಲಸ್ ಪೂರನ್ 18, ಜೇಸನ್ ಹೋಲ್ಡರ್ 57, ಫೇಬಿಯಾನ್ ಅಲೆನ್ 29 ರನ್ ಗಳಿಸಿದರು. ಭಾರತದ ಪರವಾಗಿ ಮೊಹಮ್ಮದ್ ಶಮಿ 1, ಪ್ರಸಿದ್ಧ್ ಕೃಷ್ಣ 2, ವಾಷಿಂಗ್ಟನ್ ಸುಂದರ್ 3, ಯುಜುವೇಂದ್ರ ಚಾಹಲ್ 4 ವಿಕೆಟ್ ಪಡೆದರು.
177 ರನ್ ಗೆಲುವಿನ ಟೀಂ ಇಂಡಿಯಾ 28 ಓವರುಗಳಲ್ಲಿ 4 ವಿಕೆಟ್ ಕಳೆದುಕೊಂಡು 178 ರನ್ ಗಳಿಸಿ ಗೆಲುವು ಕಂಡಿದೆ. ರೋಹಿತ್ ಶರ್ಮಾ 60, ಇಶಾನ್ ಕಿಶನ್ 28, ವಿರಾಟ್ ಕೊಹ್ಲಿ 8, ರಿಷಬ್ ಪಂತ್ 11, ಸೂರ್ಯ ಕುಮಾರ್ ಯಾದವ್ ಅಜೇಯ 34, ದೀಪಕ್ ಹೂಡ ಅಜೇಯ 26 ರನ್ ಗಳಿಸಿದರು. ವಿಂಡೀಸ್ ಪರವಾಗಿ ಎ. ಜೋಸೆಫ್ 2, ಅಕಿಲ್ ಹುಸೇನ್ 1 ವಿಕೆಟ್ ಪಡೆದರು. ಈ ಪಂದ್ಯದ ಗೆಲುವಿನೊಂದಿಗೆ ಟೀಂ ಇಂಡಿಯಾ 1000 ನೇ ಪಂದ್ಯದಲ್ಲಿ ಜಯಿಸಿ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ.