
ಫ್ಲೋರಿಡಾ: ಭಾರತ ತಂಡ ಸಂಘಟಿತ ಪ್ರದರ್ಶನ ನೀಡಿ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಪಂದ್ಯವನ್ನು 59 ರನ್ ಗಳಿಂದ ಜಯಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯನ್ನು 3 -1 ರಿಂದ ಜಯಿಸಿದೆ. ಇದು ಭಾರತದ 13 ನೇ ಸರಣಿ ಜಯವಾಗಿದೆ.
ಮಳೆಯಿಂದಾಗಿ ತಡವಾಗಿ ಆರಂಭವಾದ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು. ರೋಹಿತ್ ಶರ್ಮಾ 33, ಸೂರ್ಯಕುಮಾರ್ ಯಾದವ್ 24, ದೀಪಕ್ ಹೂಡ 21, ರಿಷಬ್ ಪಂತ್ 44, ಸಂಜು ಸ್ಯಾಮ್ಸನ್ ಅಜೇಯ 30, ದಿನೇಶ್ ಕಾರ್ತಿಕ್ 6, ಅಕ್ಷರ ಪಟೇಲ್ ಅಜೇಯ 20 ರನ್ ಗಳಿಸಿದರು. ವಿಂಡೀಸ್ ಪರವಾಗಿ ಅಕೇಲ್ ಹುಸೇನ್ 1, ಒಬೆಡ್ ಮೆಕಾಯ್ 2, ಅಲ್ಜಾರಿ ಜೋಸೆಫ್ 2 ವಿಕೆಟ್ ಪಡೆದರು.
ಗೆಲುವಿನ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ 19.1 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 132 ರನ್ ಗಳಿಸಿತು. ಬ್ರೆಂಡನ್ ಕಿಂಗ್ 13, ಕೈಲ್ ಮೇಯರ್ಸ್ 14, ಡೇವಾನ್ ಥಾಮಸ್ 1, ನಿಕೋಲಸ್ ಪೂರಾನ್ 24, ರಾವ್ ಮನ್ ಪೊವೆಲ್ 24, ಶಿಮ್ರಾನ್ ಹೆಟ್ಮಾಯಿರ್ 19, ಜೇಸನ್ ಹೋಲ್ಡರ್ 13 ರನ್ ಗಳಿಸಿದರುಅಕೇಲ್ ಹುಸೇನ್ 3, ಡೊಮಿನಿಕ್ ಡ್ರೇಕ್ಸ್ 5, ಅಲ್ಜಾರಿ ಜೋಸೆಫ್ ಅಜೇಯ 6, ಒಬೆಡ್ ಮೆಕಾಯ್ 2 ರನ್ ಗಳಿಸಿದರು. ಭಾರತದ ಪರವಾಗಿ ಆವೇಶ್ ಖಾನ್ 2, ಅಕ್ಷರ್ ಪಟೇಲ್ 2, ಆರ್ಶ್ ದೀಪ್ ಸಿಂಗ್ 3, ರವಿ ಬಿಷ್ಣೋಯಿ 2 ವಿಕೆಟ್ ಪಡೆದರು.