
ತಿರುವನಂತಪುರಂನ ಗ್ರೀನ್ ಫೀಲ್ಡ್ ಇಂಟರ್ ನ್ಯಾಷನ್ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ಭಾರತ 317 ರನ್ ಭರ್ಜರಿ ಜಯ ಗಳಿಸಿದೆ.
ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಭರ್ಜರಿ ಶತಕ, ಮೊಹಮ್ಮದ್ ಸಿರಾಜ್(4 ವಿಕೆಟ್) ಮಾರಕ ಬೌಲಿಂಗ್ ನೆರವಿನಿಂದ ಭಾರತ 3 ಪಂದ್ಯಗಳ ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪರವಾಗಿ ರೋಹಿತ್ ಶರ್ಮಾ 42, ಶುಭಮನ್ ಗಿಲ್ 116, ವಿರಾಟ್ ಕೊಹ್ಲಿ ಅಜೇಯ 166, ಶ್ರೇಯಸ್ ಅಯ್ಯರ್ 38, ಕೆ.ಎಲ್. ರಾಹುಲ್ 7, ಸೂರ್ಯ ಕುಮಾರ್ ಯಾದವ್ 4, ಹಾಗೂ ಅಕ್ಷರ್ ಪಟೇಲ್ ಅಜೇಯ 2 ರನ್ ಗಳಿಸಿದರು. ಭಾರತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 390 ರನ್ ಕಲೆಹಾಕಿತು. ಲಂಕಾ ಪರವಾಗಿ ಕಸುನ್ ರಜಿತ 2, ಲಾಹಿರು ಕುಮಾರ 2, ಚಾಮಿಕ ಕರುಣರತ್ನ 1 ವಿಕೆಟ್ ಪಡೆದರು.
ಬೃಹತ್ ಮೊತ್ತದ ಗೆಲುವಿನ ಗುರಿ ಬೆನ್ನತ್ತಿದ ಶ್ರೀಲಂಕಾ ಮೊಹಮ್ಮದ್ ಸಿರಾಜ್ ದಾಳಿಗೆ ತತ್ತರಿಸಿತು, 22 ಓವರ್ ಗಳಿಗೆ 73 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಶ್ರೀಲಂಕಾ ಪರವಾಗಿ ನುವನಿದು ಫೆರ್ನಾಂಡೊ 19, ದಾಸನ್ ಶನಕ 11 ರನ್, ಕಸುನ್ ರಜಿತ 13 ಗಳಿಸಿದರು. ಮೊಹಮ್ಮದ್ ಸಿರಾಜ್ 4, ಮೊಹಮದ್ ಶಮಿ 2, ಕುಲದೀಪ್ ಯಾದವ್ 2 ವಿಕೆಟ್ ಪಡೆದರು.