
ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 7 ವಿಕೆಟ್ ಗಳ ಭರ್ಜರಿ ಜಯಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಭಾರತದ ಬೌಲರ್ ಗಳ ಸಂಘಟಿತ ದಾಳಿಗೆ ತತ್ತರಿಸಿ 42.5 ಓವರ್ ಗಳಲ್ಲಿ 191 ರನ್ ಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಪಾಕಿಸ್ತಾನ ಪರವಾಗಿ ಬಾಬರ್ ಆಜಂ 50, ಮಹಮ್ಮದ್ ರಿಜ್ವಾನ್ 49, ಇಮಾಮ್ ಉಲ್ ಹಕ್ 36 ರನ್ ಗಳಿಸಿದರು. ಭಾರತದ ಪರ ಬೂಮ್ರಾ, ಮಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ರವೀದ್ರ ಜಡೇಜ ತಲಾ 2 ವಿಕೆಟ್ ಪಡೆದರು.
ಗೆಲುವಿನ ಗುರಿ ಬೆನ್ನತ್ತಿದ ಭಾರತ 30.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿ ಗೆಲುವಿನ ನಗೆ ಬೀರಿದೆ. ರೋಹಿತ್ ಶರ್ಮಾ 86, ಶುಭಮನ್ ಗಿಲ್ 16, ವಿರಾಟ್ ಕೊಹ್ಲಿ 16, ಶ್ರೇಯಸ್ ಅಯ್ಯರ್ ಅಜೇಯ 53, ಕೆ.ಎಲ್. ರಾಹುಲ್ ಅಜೇಯ 19 ರನ್ ಗಳಿಸಿದರು. ಪಾಕ್ ಪರ ಶಾಹಿನ್ ಅಫ್ರಿದಿ 2, ಹಸನ್ ಅಲಿ 1 ವಿಕೆಟ್ ಪಡೆದರು.
ಈ ಮೂಲಕ ಭಾರತ ವಿಶ್ವಕಪ್ ನಲ್ಲಿ 8 ನೇ ಬಾರಿಗೆ ಪಾಕಿಸ್ತಾನದ ವಿರುದ್ಧ ಜಯಗಳಿಸಿದೆ.