ಮೌಂಟ್ ಮಾಂಗನುಯಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ 2 ನೇ ಪಂದ್ಯದಲ್ಲಿ ಭರ್ಜರಿ ಜಯಗಳಿಸಿದ ಭಾರತ 1 -0 ಮುನ್ನಡೆ ಗಳಿಸಿದೆ.
ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಬೇ ಓವಲ್ ಮೈದಾನದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ದುಕೊಂಡಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪರ ಇಶಾನ್ ಕಿಶನ್ 36, ರಿಷಬ್ ಪಂತ್ 6, ಸೂರ್ಯಕುಮಾರ್ ಯಾದವ್ ಅಜೇಯ 111, ಶ್ರೇಯಸ್ ಅಯ್ಯರ್ 13, ಹಾರ್ದಿಕ್ ಪಾಂಡ್ಯ 13, ದೀಪಕ್ ಹೂಡಾ 0, ವಾಷಿಂಗ್ಟನ್ ಸುಂದರ್ 0, ಭುವನೇಶ್ವರ್ ಕುಮಾರ್ ಅಜೇಯ 1 ರನ್ ಗಳಿಸಿದ್ದಾರೆ. ಭಾರತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು.
ನ್ಯೂಜಿಲೆಂಡ್ ಪರ ಲುಕಿ ಫೆರ್ಗುಸನ್ 2, ಇಶ್ ಸೋದಿ 1, ಟಿಮ್ ಸೋದಿ 3 ವಿಕೆಟ್ ಪಡೆದರು. 192 ರನ್ ಗೆಲುವಿನ ಗುರಿ ಪಡೆದ ನ್ಯೂಜಿಲೆಂಡ್ 18.5 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 126 ರನ್ ಗಳಿಸಿದೆ.
ಡ್ವೇನ್ ಕಾನ್ವೆ 25, ಕೇನ್ ವಿಲಿಯಮ್ಸನ್ 61, ಗ್ಲೆನ್ ಫಿಲಿಪ್ಸ್ 12, ಡೇರ್ಲ್ ಮಿಚೆಲ್ 10 ರನ್ ಗಳಿಸಿದರು. ಭಾರತದ ಪರವಾಗಿ ಭುವನೇಶ್ವರ್ ಕುಮಾರ್ 1, ಮೊಹಮ್ಮದ್ ಸಿರಾಜ್ 2, ವಾಷಿಂಗ್ಟನ್ ಸುಂದರ್ 1, ಯಜುವೇಂದ್ರ ಚಾಹಲ್ 2, ದೀಪಕ್ ಹೂಡಾ 4 ವಿಕೆಟ್ ಪಡೆದರು. 2ನೇ ಟಿ20ಯಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 65 ರನ್‌ಗಳ ಜಯ ಸಾಧಿಸಿದ್ದು, ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.