alex Certify BREAKING NEWS: ಕೊಹ್ಲಿ 95 ರನ್, ಶಮಿ 5 ವಿಕೆಟ್: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಕೊಹ್ಲಿ 95 ರನ್, ಶಮಿ 5 ವಿಕೆಟ್: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಧರ್ಮಶಾಲಾ: ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ 4 ವಿಕೆಟ್ ಜಯಗಳಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 50 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 273 ರನ್ ಗಳಿಸಿತು. ಡೆರ್ಲ್ ಮಿಚಲ್ 130, ರಚಿನ್ ರವೀಂದ್ರ 75, ಗ್ಲೆನ್ ಫಿಲಿಪ್ಸ್ 23 ರನ್ ಗಳಿಸಿದರು. ಭಾರತದ ಪರ ಮಹಮ್ಮದ್ ಶಮಿ 5, ಕುಲದೀಪ್ ಯಾದವ್ 2 ವಿಕೆಟ್ ಪಡೆದರು.

ಗೆಲುವಿನ ಗುರಿ ಬೆನ್ನುತ್ತಿದ ಭಾರತ 48 ಓವರ್ ಗಳಲ್ಲಿ 6 ವಿಕಟ್ ನಷ್ಟಕ್ಕೆ 274 ರನ್ ಗಳಿಸಿ ಗೆಲುವು ಕಂಡಿದೆ. ರೋಹಿತ್ ಶರ್ಮಾ 46, ಶುಭಮನ್ ಗೆಲ್ 26, ವಿರಾಟ್ ಕೊಹ್ಲಿ 95, ಶ್ರೇಯಸ್ ಅಯ್ಯರ್ 33, ಕೆ.ಎಲ್. ರಾಹುಲ್ 27, ಸೂರ್ಯಕುಮಾರ್ ಯಾದವ್ 2, ರವೀಂದ್ರ ಜಡೇಜ ಅಜೇಯ 39, ಮೊಹಮ್ಮದ್ ಶಮಿ ಅಜೇಯ 1 ರನ್ ಗಳಿಸಿದರು. ನ್ಯೂಜಿಲೆಂಡ್ ಪರ ಲೂಕಿ ಫೆರ್ಗುಸನ್ 2, ಟ್ರೆಂಟ್ ಬೋಲ್ಟ್ 1, ಮಿಚೆಲ್ ಸ್ಯಾಟ್ನರ್ 1, ಮ್ಯಾತ್ ಹೆನ್ರಿ 1 ವಿಕೆಟ್ ಪಡೆದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...