
ಬೆಂಗಳೂರು: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಟೀಂ ಇಂಡಿಯಾ 160 ರನ್ ಗಳ ಭರ್ಜರಿ ಜಯಗಳಿಸಿದೆ.
ಇದರೊಂದಿಗೆ ವಿಶ್ವಕಪ್ ಲೀಗ್ ಪಂದ್ಯಗಳಲ್ಲಿ ಭಾರತ ಸತತ 9ನೇ ಜಯ ದಾಖಲಿಸಿದೆ. ನೆದರ್ಲೆಂಡ್ಸ್ ವಿರುದ್ಧ ಕೊನೆ ಲೀಗ್ ಪಂದ್ಯದಲ್ಲೂ ಜಯಗಳಿಸಿದೆ.
ಟಾಸ್ ಗೆದ್ದು ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದು, ಭಾರತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 410 ರನ್ ಗಳಿಸಿದ್ದು, ನೆದರ್ಲೆಂಡ್ಸ್ ಗೆ 411 ಗೆಲುವಿನ ಗುರಿ ನೀಡಿತು.
ರೋಹಿತ್ ಶರ್ಮಾ 61, ಶುಭಮನ್ ಗಿಲ್ 51, ವಿರಾಟ್ ಕೊಹ್ಲಿ 51, ಶ್ರೇಯಸ್ ಅಯ್ಯರ್ ಅಜೇಯ 128, ಕೆ.ಎಲ್. ರಾಹುಲ್ 102, ಸೂರ್ಯಕುಮಾರ್ ಯಾದವ್ ಅಜೇಯ 2 ರನ್ ಗಳಿಸಿದರು.
ಕೆ.ಎಲ್. ರಾಹುಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 64 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸರ್ ನೆರವಿನಿಂದ 102 ರನ್ ಗಳಿಸಿದರು. ಶ್ರೇಯಸ್ 94 ಎಸೆತಗಳಲ್ಲಿ 10 ಬೌಂಡರಿ, 5 ಸಿಕ್ಸರ್ ಸಹಿತ 128 ರನ್ ಗಳಿಸಿದರು. ನೆದರ್ಲೆಂಡ್ಸ್ ಪರ ಬಾಸ್ ಡಿ ಲೀಡ್ 2, ಆರ್.ವಿ. ಡೆರ್ ಮೆರ್ವೆ 1, ಪಾಲ್ ವಾನ್ ಮಿಕರೇನ್ 1 ವಿಕೆಟ್ ಪಡೆದರು.
ಗೆಲುವಿನ ಗುರಿ ಬೆನ್ನತ್ತಿದ ನೆದರ್ಲ್ಯಾಂಡ್ಸ್ ಪರ ಮ್ಯಾಕ್ಸ್ ಒಡಿವೋಡ್ 30, ಕೋಲಿನ್ ಆಕೆರೆಮನ್ 35, ಸಿಬ್ರಾಡ್ ಎಂಜೆಲಬ್ರೇಟ್ 45, ತೇಜ ನಿದಾಮನುರು 54 ರನ್ ಗಳಿಸಿದರು. ನೆದರ್ಲೆಂಡ್ಸ್ 47.5 ಓವರ್ ಗಳಲ್ಲಿ 250 ರನ್ ಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು.
ಭಾರತದ ಪರ ವಿರಾಟ್ ಕೊಹ್ಲಿ 1, ರೋಹಿತ್ ಶರ್ಮಾ 1, ರವೀಂದ್ರ ಜಡೇಜ 2, ಕುಲದೀಪ್ ಯಾದವ್ 2, ಮಹಮ್ಮದ್ ಸಿರಾಜ್ 2, ಬೂಮ್ರಾ 2 ವಿಕೆಟ್ ಪಡೆದರು.