
ಲಂಡನ್: ಲಾರ್ಡ್ಸ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಂಗ್ಲರನ್ನು ಮಣಿಸಿದ ಕೊಹ್ಲಿ ಪಡೆ ಗೆಲುವಿನ ನಗೆ ಬೀರಿದೆ.
ಆತಿಥೇಯ ಇಂಗ್ಲೆಂಡ್ ತಂಡವನ್ನು 151 ರನ್ ಗಳಿಂದ ಬಗ್ಗು ಬಡಿದ ಟೀಮ್ ಇಂಡಿಯಾ ಸರಣಿಯಲ್ಲಿ 1 -0 ಮುನ್ನಡೆ ಸಾಧಿಸಿದೆ. ಲಾರ್ಡ್ಸ್ ಮೈದಾನದಲ್ಲಿ ಭಾರತ 7 ವರ್ಷಗಳ ನಂತರ ಐತಿಹಾಸಿಕ ಗೆಲುವು ಸಾಧಿಸಿದೆ. ಮೊಹಮ್ಮದ್ ಶಮಿ(56) ಮತ್ತು ಬೂಮ್ರಾ(34) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ 272 ರನ್ ಗಳ ಗೆಲುವಿನ ಗುರಿ ನೀಡಿ ಇನಿಂಗ್ಸ್ ಮಾಡಿಕೊಂಡಿತ್ತು. ಇಂಗ್ಲೆಂಡ್ ತಂಡ 120 ರನ್ ಗಳಿಗೆ ಆಲ್ ಔಟ್ ಆಯಿತು. ಟೀಂ ಇಂಡಿಯಾ ಪರವಾಗಿ ಬೂಮ್ರಾ 3, ಮೊಹಮ್ಮದ್ ಶಮಿ 1, ಮೊಹಮ್ಮದ್ ಸಿರಾಜ್ 4, ಇಶಾಂತ್ ಶರ್ಮಾ 2 ವಿಕೆಟ್ ಪಡೆದರು.
ಸ್ಕೋರ್ ವಿವರ
ಭಾರತ ಮೊದಲ ಇನಿಂಗ್ಸ್ 364/10, ಎರಡನೇ ಇನಿಂಗ್ಸ್ 298/8
ಇಂಗ್ಲೆಂಡ್ ಮೊದಲ ಇನಿಂಗ್ಸ್ 391/10, ಎರಡನೇ ಇನಿಂಗ್ಸ್ 120/10