ಸಿಡ್ನಿ: ಎರಡನೇ ಟಿ-20 ಪಂದ್ಯದಲ್ಲಿ ಭರ್ಜರಿ ಜಯಗಳಿಸಿದ ಭಾರತ ತಂಡ ಟಿ-20 ಸರಣಿ ಜಯಿಸಿದೆ. ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿದೆ. ಆಸ್ಟ್ರೇಲಿಯಾ ಪರವಾಗಿ ಮ್ಯಾಥ್ಯೂ ವೇಡ್ 58, ಸ್ಟೀವನ್ ಸ್ಮಿತ್ 46, ಗ್ಲೆನ್ ಮ್ಯಾಕ್ಸ್ವೆಲ್ 22, ಮೊಯಿಸ್ ಹೆನ್ರಿಕ್ವಿಸ್ 26, ಮಾರ್ಕಸ್ ಸ್ಟೊಯ್ನಿಯಸ್ 16 ರನ್ ಗಳಿಸಿದ್ದು, ಭಾರತದ ಪರ ಶಾರ್ದೂಲ್ ಠಾಕೂರ್ 1, ಟಿ. ನಟರಾಜನ್ 2, ಯಜುವೇಂದ್ರ ಚಹಾಲ್ 1 ವಿಕೆಟ್ ಪಡೆದರು.
195 ಗೆಲುವಿನ ಗುರಿ ಬೆನ್ನತ್ತಿದ್ದ ಭಾರತ 19.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು. ಕೆ.ಎಲ್. ರಾಹುಲ್ 30, ಶಿಖರ್ ಧವನ್ 52, ವಿರಾಟ್ ಕೊಹ್ಲಿ 40, ಸಂಜು ಸ್ಯಾಮ್ಸನ್ 15, ಹಾರ್ದಿಕ್ ಪಾಂಡ್ಯ ಅಜೇಯ 42, ಶ್ರೇಯಸ್ ಅಯ್ಯರ್ ಅಜೇಯ 12 ರನ್ ಗಳಿಸಿದ್ದಾರೆ. 6 ವಿಕೆಟ್ ಗಳಿಂದ ಆಸ್ಟ್ರೇಲಿಯಾ ತಂಡವನ್ನು ಬಗ್ಗುಬಡಿದ ಟೀಂ ಇಂಡಿಯಾ ಟಿ20 ಸರಣಿ ಜಯಿಸಿದೆ. 3 ಪಂದ್ಯಗಳ ಸರಣಿಯಲ್ಲಿ 2 -0 ಅಂತರದಿಂದ ಜಯಿಸಿದ್ದು, ಡಿಸೆಂಬರ್ 8 ರಂದು ಕೊನೆ ಪಂದ್ಯ ನಡೆಯಲಿದೆ.