ಹೈದರಾಬಾದ್: ರಣಜಿ ಪಂದ್ಯದಲ್ಲಿ ಹೈದರಾಬಾದ್ ನ ತನ್ಮಯ್ 147 ಎಸೆತದಲ್ಲಿ ತ್ರಿ ಶತಕ ಗಳಿಸಿ ವಿಶ್ವ ದಾಖಲೆ ಬರೆದಿದ್ದಾರೆ.
ಹೈದರಾಬಾದ್ ನ ಸ್ಟಾರ್ ಬ್ಯಾಟರ್ ತನ್ಮಯ್ ಅಗರ್ವಾಲ್ ಪ್ರಥಮ ದರ್ಜೆಯ ಕ್ರಿಕೆಟ್ ನಲ್ಲಿ ವೇಗದ ತ್ರಿಶತಕದ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ರಣಜಿ ಟ್ರೋಫಿಯ ಪ್ಲೇಟ್ ಗುಂಪಿನ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ತನ್ಮಯ್ ಸಾಧನೆ ಮಾಡಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಅರುಣಾಚಲ ಪ್ರದೇಶ 172 ರನ್ ಗೆ ಆಲ್ ಔಟ್ ಆಯಿತು. ಹೈದರಾಬಾದ್ ಪರ ತನ್ಮಯ್ 119 ಎಸೆತದಲ್ಲಿ ದ್ವಿಶತಕ ಪೂರ್ಣಗೊಳಿಸಿದರು. ಪ್ರಥಮ ದರ್ಜೆಯಲ್ಲಿ ವೇಗದ ದ್ವಿಶತಕ ಸಿಡಿಸಿದ ಭಾರತೀಯ ಎನಿಸಿಕೊಂಡರು.
ನಂತರ 147 ಎಸೆತದಲ್ಲಿ 300 ರನ್ ಪೂರ್ಣಗೊಳಿಸಿದರು. ದಕ್ಷಿಣ ಆಫ್ರಿಕಾದ ಮಾರ್ಕೊ ಮರೈಸ್ 191 ಎಸೆತದಲ್ಲಿ 300 ರನ್ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ತನ್ಮಯ್ 160 ಎಸೆತಗಳಲ್ಲಿ ಅಜೇಯ 323 ರನ್ ಗಳಿಸಿದ್ದಾರೆ. 21 ಸಿಕ್ಸರ್ ಸಿಡಿಸಿರುವ ಅವರು ರಣಜಿ ಇನಿಂಗ್ಸ್ ನಲ್ಲಿ ಗರಿಷ್ಠ ಸಿಕ್ಸರ್ ದಾಖಲೆ ಬರೆದಿದ್ದಾರೆ. ಅವರ ತಂಡ ಕೇವಲ 47.4 ಓವರ್ ಗಳಲ್ಲಿ ಒಂದು ವಿಕೆಟ್ ಗೆ 528 ರನ್ ಗಳಿಸಿತು.