ಮೊಹಾಲಿಯ ಪಂಜಾಬ್ ಕ್ರಿಕೆಟ್ ಸಂಸ್ಥೆ ಐ.ಎಸ್. ಬಿಂದ್ರಾ ಕ್ರೀಡಾಂಗಣದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ನಡೆಸಿ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿದೆ. ಆಸ್ಟ್ರೇಲಿಯಾಕ್ಕೆ 209 ರನ್ ಗೆಲುವಿನ ಗುರಿ ನೀಡಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತ ಪರ ಕೆ.ಎಲ್. ರಾಹುಲ್ 55, ರೋಹಿತ್ ಶರ್ಮಾ 11, ವಿರಾಟ್ ಕೊಹ್ಲಿ 2, ಸೂರ್ಯಕುಮಾರ್ ಯಾದವ್ 46, ಹಾರ್ದಿಕ್ ಪಾಂಡ್ಯ ಅಜೇಯ 71, ಅಕ್ಷರ್ ಪಟೇಲ್ 6, ದಿನೇಶ್ ಕಾರ್ತಿಕ್ 6, ಹರ್ಷಲ್ ಪಟೇಲ್ ಅಜೇಯ 7 ರನ್ ಗಳಿಸಿದ್ದಾರೆ.
ಆಸ್ಟ್ರೇಲಿಯಾ ಪರವಾಗಿ ಜೋಷ್ ಹೇಜಲ್ವುಡ್ 2, ನೇಥಾನ್ ಎಲ್ಲಿಸ್ 3, ಕ್ಯಾಮರೂನ್ ಗ್ರೀನ್ 1 ವಿಕೆಟ್ ಪಡೆದರು.