ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತದ ಗೆಲುವಿಗೆ 5 ವಿಕೆಟ್ ಗಳ ಅಗತ್ಯವಿದೆ.
ನ್ಯೂಜಿಲೆಂಡ್ ತಂಡದ ಗೆಲುವಿಗೆ 540 ರನ್ ಗಳ ಕಠಿಣ ಗುರಿ ನೀಡಿದ ಭಾರತ ಗೆಲುವಿಗೆ ಇನ್ನು 5 ವಿಕೆಟ್ ಗಳು ಬೇಕಿದೆ. ಮೊದಲ ಇನಿಂಗ್ಸ್ ನಲ್ಲಿ ನ್ಯೂಜಿಲೆಂಡ್ ತಂಡವನ್ನು ಕೇವಲ 62 ರನ್ ಗಳಿಗೆ ಕಟ್ಟಿಹಾಕಿದ್ದ ಭಾರತದ ಬೌಲರ್ ಗಳು ದ್ವಿತೀಯ ಇನ್ನಿಂಗ್ಸ್ ನಲ್ಲಿ ಈಗಾಗಲೇ 5 ವಿಕೆಟ್ ಗಳಿಸಿದ್ದಾರೆ. ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿದ್ದು, ಬೃಹತ್ ಮೊತ್ತವನ್ನು ಬೆನ್ನಟ್ಟುವುದು ಕಷ್ಟಸಾಧ್ಯವಾಗಿದೆ. ಸ್ಪಿನ್ ಗೆ ನೆರವಾಗುತ್ತಿರುವ ವಾಂಖೆಡೆ ಪಿಚ್ ನಲ್ಲಿ ಆರ್. ಅಶ್ವಿನ್ ಎರಡನೇ ಇನಿಂಗ್ಸ್ ನಲ್ಲಿ 3 ವಿಕೆಟ್ ಪಡೆದಿದ್ದಾರೆ. ಇಂದು ಬೆಳಿಗ್ಗೆ ಆರಂಭವಾಗುತ್ತಿದ್ದಂತೆ ಅಶ್ವಿನ್ ಬಳಗ ನ್ಯೂಜಿಲೆಂಡ್ ತಂಡದ ಮೇಲೆ ನಿಯಂತ್ರಣ ಸಾಧಿಸಿದಲ್ಲಿ ಭೋಜನ ವಿರಾಮದ ವೇಳೆಗೆ 5 ವಿಕೆಟ್ ಪಡೆದು ವಿಜಯಲಕ್ಷ್ಮಿ ಒಲಿಸಿಕೊಳ್ಳಬಹುದು.
ಭಾರತ ಮೊದಲ ಇನಿಂಗ್ಸ್ 325
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 62
ಭಾರತ ಎರಡನೇ ಇನಿಂಗ್ಸ್ 70 ಓವರ್ ಗಳಲ್ಲಿ 7 ವಿಕೆಟ್ ಗೆ 276 ಡಿಕ್ಲೇರ್ಡ್
ನ್ಯೂಜಿಲೆಂಡ್ ಎರಡನೇ ಇನಿಂಗ್ಸ್ 5 ವಿಕೆಟ್ ಗೆ 140