ಕೊಲಂಬೊ: ಆತಿಥೇಯ ಶ್ರೀಲಂಕಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 3 ವಿಕೆಟ್ ಗಳ ರೋಚಕ ಜಯ ಗಳಿಸಿದ್ದು, 2 -0 ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 9 ವಿಕೆಟ್ ನಷ್ಟಕ್ಕೆ 275 ರನ್ ಗಳಿಸಿತ್ತು. ಆವಿಷ್ಕಾ 50, ಮಿನೋದ್ 36, ಚರಿತ್ ಅಸಲಂಕ 65,ಚಮಿಕಾ ಕರುಣರತ್ನೆ ಅಜೇಯ 44 ರನ್ ಗಳಿಸಿದರು. ಭಾರತದ ಪರ ಭುವನೇಶ್ವರ್ 3, ದೀಪಕ್ ಚಹರ್ 2, ಚಾಹಲ್ 3 ವಿಕೆಟ್ ಪಡೆದರು.
ಗೆಲುವಿನ ಗುರಿ ಬೆನ್ನತ್ತಿದ ಭಾರತ 49.1 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿ ಗೆಲುವಿನ ನಗೆ ಬೀರಿದೆ. ಪೃಥ್ವಿ ಶಾ 13, ಶಿಖರ್ ಧವನ್ 29, ಮನೀಶ್ ಪಾಂಡೆ 37, ಸೂರ್ಯಕುಮಾರ್ 53, ಕೃನಾಲ್ ಪಾಂಡ್ಯ 35, ದೀಪಕ್ ಚಹರ್ ಅಜೇಯ 69, ಭುವನೇಶ್ವರ್ ಅಜೇಯ 19 ರನ್ ಗಳಿಸಿದರು. ಎರಡು ವಿಕೆಟ್ ಗಳಿಸಿ ಅಜೇಯ 69 ರನ್ ಗಳಿಸಿದ ದೀಪಕ್ ಚಹರ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.