ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಮುಕ್ತಾಯವಾಗಿದೆ. ಭಾರತ ಪಂದ್ಯದಲ್ಲಿ ಗೆಲವು ಸಾಧಿಸಿದೆ. ಟೆಸ್ಟ್ ನ ಎರಡನೇ ದಿನದ ಆರಂಭದಲ್ಲಿ ಟೀಮ್ ಇಂಡಿಯಾಗೆ ರಿಷಬ್ ಪಂತ್ ಆಸರೆಯಾಗಿದ್ದರು. ಅವರ ಅದ್ಭುತ ಶತಕದ ನಂತ್ರ ವಾಷಿಂಗ್ಟನ್ ಸುಂದರ್ ತಂಡದ ಜವಾಬ್ದಾರಿ ವಹಿಸಿಕೊಂಡರು. ಉತ್ತಮ ಆಟವಾಡಿದ್ರೂ ವಾಷಿಂಗ್ಟನ್ ಸುಂದರ್ ಶತಕ ವಂಚಿತರಾದರು.
ಪಂದ್ಯದ ಮೂರನೇ ದಿನ ವಾಷಿಂಗ್ಟನ್ ಸುಂದರ್, ಟೀಮ್ ಇಂಡಿಯಾದ ಸ್ಕೋರ್ ಹೆಚ್ಚಾಗಲು ಕಾರಣವಾದ್ರು. ಉತ್ತಮ ಆಟವಾಡಿದ ಸುಂದರ್ ಔಟ್ ಆಗದೆ ಹೋದ್ರೂ ಶತಕ ಬಾರಿಸುವ ಅವಕಾಶ ಸಿಗಲಿಲ್ಲ. ಸುಂದರ್ 174 ಎಸೆತಗಳಲ್ಲಿ ಅಜೇಯ 96 ರನ್ ಗಳಿಸಿದರು. ನಾಲ್ಕು ರನ್ ಗಳಿಂದ ಶತಕ ವಂಚಿತರಾದ್ರು. ಸಿರಾಜ್ ಮತ್ತು ಇಶಾಂತ್ ಶರ್ಮಾ ಔಟಾಗದೆ ಹೋಗಿದ್ರೆ ಸುಂದರ್ ಶತಕ ಪೂರ್ಣಗೊಳಿಸುತ್ತಿದ್ದರು. ಆದ್ರೆ ಸಿರಾಜ್ ಹಾಗೂ ಇಶಾಂತ್ ಇಬ್ಬರೂ ಖಾತೆ ತೆರೆಯದೇ ಪೆವಿಲಿಯನ್ ಗೆ ತೆರಳಿದ್ದು, ಸುಂದರ್ ಶತಕ ಬಾರಿಸದಿರಲು ಕಾರಣವಾಯ್ತು.
ಬ್ಯಾಟ್ಸ್‌ಮನ್ ಔಟ್ ಆಗದೆ ಶತಕ ಪೂರ್ಣಗೊಳಿಸಲು ಸಾಧ್ಯವಾಗದಿರುವುದು ಇದೇ ಮೊದಲಲ್ಲ. 1974-75 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 97 ರನ್ ಗಳಿಸಿದ ನಂತರ ಗುಂಡಪ್ಪ ವಿಶ್ವನಾಥ್ ಅಜೇಯರಾಗಿದ್ದರು. 1985ರಲ್ಲಿ ಶ್ರೀಲಂಕಾ ವಿರುದ್ಧ ದಿಲೀಪ್ ವೆಂಗ್ಸಾರ್ಕರ್ ಅಜೇಯರಾಗಿ 98 ರನ್ ಗಳಿಸಿದ್ದರು. 2012-13ರಲ್ಲಿ ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್ ವಿರುದ್ಧ 91 ರನ್ ಗಳಿಸಿ ಅಜೇಯರಾಗಿದ್ದರು.