ಮ್ಯಾಂಚೆಸ್ಟರ್: ರಿಷಬ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಜಯಗಳಿಸಿದ್ದು, 2 -1 ರಿಂದ ಸರಣಿ ಜಯಿಸಿದೆ.
ರಿಷಬ್ ಪಂತ್ ಅಜೇಯ 125 ರನ್ ಸಿಡಿಸಿದ್ದಾರೆ. ಹಾರ್ದಿಕ ಪಾಂಡ್ಯ 4 ವಿಕೆಟ್ ಪಡೆದು 71 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 45.5 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 259 ರನ್ ಗಳಿಸಿತು. ಜೇಸನ್ ರಾಯ್ 41, ಬೆನ್ ಸ್ಟೋಕ್ಸ್ 27, ಜೋಸ್ ಬಟ್ಲರ್ 60, ಮೊಯಿನ್ 34, ಓವರ್ ಟನ್ 32, ಲಿವಿಂಗ್ ಸ್ಟೋನ್ 27 ರನ್ ಗಳಿಸಿದರು. ಭಾರತದ ಪರವಾಗಿ ಹಾರ್ದಿಕ್ ಪಾಂಡ್ಯ 4, ಸಿರಾಜ್ 2, ಚಾಹಲ್ 3, ಜಡೇಜಾ 1 ವಿಕೆಟ್ ಪಡೆದರು.
ಗೆಲುವಿನ ಗುರಿ ಬೆನ್ನತ್ತಿದ ಭಾರತ 42.1 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿತು. ರೋಹಿತ್ ಶರ್ಮ 17, ಶಿಖರ ಧವನ್ 1, ವಿರಾಟ್ ಕೊಹ್ಲಿ 17, ಸೂರ್ಯಕುಮಾರ್ 16 ರನ್ ಗಳಿಸಿದರು. 72 ರ ನ್ ಗೆ 4 ವಿಕೆಟ್ ಕಳೆದುಕೊಂಡ ಭಾರತ ಸೋಲಿನ ಭೀತಿಯಲ್ಲಿತ್ತು. 5 ನೇ ವಿಕೆಟ್ ಗೆ ರಿಷಬ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಜೋಡಿ 133 ರನ್ ಜೊತೆ ಆಟವಾಡಿದರು. ಹಾರ್ದಿಕ್ ಪಾಂಡ್ಯ 55 ಎಸೆತಗಳಲ್ಲಿ 71 ರಂದು ಸಿಡಿಸಿದರೆ, ಪಂತ್ ಅಜೇಯ 125 ರನ್ ಗಳಿಸಿದರು.