ಅಹಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ 7 ವಿಕೆಟ್ ಗಳ ಭರ್ಜರಿ ಜಯಗಳಿಸಿದ್ದು ಸೇಡು ತೀರಿಸಿಕೊಂಡಿದೆ. 5 ಪಂದ್ಯಗಳ ಸರಣಿ 1 -1 ರ ಸಮಬಲ ಕಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರುಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದೆ. ಜೇಸನ್ ರಾಯ್ 46, ಡೇವಿಡ್ ಮಲಾನ್ 24, ಬೈರ್ ಸ್ಟೊವ್ 20, ಇಯಾನ್ ಮಾರ್ಗನ್ 28, ಬೆನ್ ಸ್ಟೋಕ್ಸ್ 24 ರನ್ ಗಳಿಸಿದ್ದಾರೆ. ಭಾರತದ ಪರ ವಾಷಿಂಗ್ಟನ್ ಸುಂದರ್ 2, ಶಾರ್ದೂಲ್ ಠಾಕೂರ್ 2, ಭುವನೇಶ್ವರ್ ಕುಮಾರ್ 1, ಯಜುವೇಂದ್ರ ಚಾಹಲ್ 1 ವಿಕೆಟ್ ಗಳಿಸಿದ್ದಾರೆ.
165 ರನ್ ಗೆಲುವಿನ ಗುರಿ ಪಡೆದ ಟೀಂ ಇಂಡಿಯಾ 17.5 ಓವರುಗಳಲ್ಲಿ 3 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿದೆ. ಭಾರತದ ಪರವಾಗಿ ಇಶಾನ್ ಕಿಶನ್ 56, ವಿರಾಟ್ ಕೊಹ್ಲಿ ಅಜೇಯ 73, ರಿಷಬ್ ಪಂತ್ 26, ಶ್ರೇಯಸ್ ಅಯ್ಯರ್ ಅಜೇಯ 8 ರನ್ ಗಳಿಸಿದ್ದಾರೆ.
ಇಶಾನ್ ಕಿಶನ್ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅಬ್ಬರದ ಅರ್ಧ ಶತಕ ಸಿಡಿಸಿದ್ದಾರೆ. ಕೇವಲ 28 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದ್ದಾರೆ. ವಿರಾಟ್ ಕೊಹ್ಲಿ ಅಜೇಯ 73 ರನ್ ಗಳಿಸಿದ್ದಾರೆ.