ವಿರಾಟ್ ಕೊಹ್ಲಿ ಆರು ವರ್ಷಗಳ ನಂತರ ಏಕದಿನ ಕ್ರಿಕೆಟ್ ನಲ್ಲಿ ಬೌಲಿಂಗ್ ಮಾಡಿದ್ದಾರೆ. ಗುರುವಾರ ಬಾಂಗ್ಲಾದೇಶದ ವಿರುದ್ಧದ ಐಸಿಸಿ ವಿಶ್ವಕಪ್ 2023ರ ಭಾರತದ ನಾಲ್ಕನೇ ಪಂದ್ಯದ ವೇಳೆ ಕೊಹ್ಲಿ ಬೌಲಿಂಗ್ ಮಾಡಿದ್ರು.
ಹಾರ್ದಿಕ್ ಪಾಂಡ್ಯ ಅವರು ಪ್ರಾರಂಭಿಸಿದ 8ನೇ ಓವರ್ ಅನ್ನು ಕೊಹ್ಲಿ ಪೂರ್ಣಗೊಳಿಸಿದ್ರು. ಮೂರನೇ ಎಸೆತದ ನಂತರ ಪಾದದ ಗಾಯಕ್ಕೆ ಒಳಗಾದ ಕಾರಣ ಪಾಂಡ್ಯಗೆ ಬೌಲಿಂಗ್ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಉಳಿದ ಮೂರು ಎಸೆತಗಳನ್ನು ಬೌಲ್ ಮಾಡಲು ನಾಯಕ ರೋಹಿತ್ ಶರ್ಮಾ ಕೊಹ್ಲಿಯನ್ನು ಆಯ್ಕೆ ಮಾಡಿದ್ದು, ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ರು.
ಬಹಳ ಸಮಯದ ನಂತರ ಕೊಹ್ಲಿಯ ಅಸಾಂಪ್ರದಾಯಿಕ ಬೌಲಿಂಗ್ ನೋಡಿದ ಅಭಿಮಾನಿಗಳು ಭ್ರಮನಿರಸನಗೊಂಡ್ರು. ತಮ್ಮ ಬೌಲಿಂಗ್ ನಲ್ಲಿ ಎರಡು ರನ್ ಗಳನ್ನು ಕೊಹ್ಲಿ ನೀಡಿದ್ರು. ಆದರೆ, ಬೌಲಿಂಗ್ ನಲ್ಲಿ ಅವರಿಟ್ಟ ಹೆಜ್ಜೆಯ ಬಗ್ಗೆ ಕಾಮೆಂಟೇಟರ್ ಗಳು ಮಾತನಾಡಿದ್ರು. ಮುಖವನ್ನು ಕಿವುಚಿಕೊಂಡು ಕೊಹ್ಲಿ ಬೌಲ್ ಮಾಡಿದ್ದರು. ಈ ವಿಡಿಯೋ ಇದೀಗ ಸಾಕಷ್ಟು ಸದ್ದು ಮಾಡಿದೆ.
ಹಿಂದೊಮ್ಮೆ ಗೌರವ್ ಕಪೂರ್ ಅವರೊಂದಿಗಿನ ಚಾಟ್‌ನಲ್ಲಿ ಕೊಹ್ಲಿ ಸ್ವತಃ ತಮ್ಮ ಬೌಲಿಂಗ್ ಬಗ್ಗೆ ಮಾತನಾಡಿದ್ದರು. ದೇವರು ನಿಜವಾಗಿಯೂ ನನಗೆ ಮುಖಭಾವದಲ್ಲಿ ನಿಜಕ್ಕೂ ಕೆಟ್ಟದ್ದನ್ನು ಮಾಡಿದ್ದಾನೆ. ಆದರೆ, ನಾನು ತನ್ನದೇ ರೀತಿಯಲ್ಲಿ ಲಯವನ್ನು ನಿರ್ಮಿಸುತ್ತೇನೆ. ಬೇರೆ ರೀತಿಯಲ್ಲಿ ನನಗೆ ಬೌಲಿಂಗ್ ಮಾಡಲು ಸಾಧ್ಯವಿಲ್ಲ. ನಾನು ಸ್ಪಿನ್ ಬೌಲ್ ಮಾಡಿದ್ರೂ, ನಾನು ಆ ರೀತಿಯೇ ಮಾಡುತ್ತೇನೆ ಎಂದು ಐದು ವರ್ಷಗಳ ಹಿಂದೆ ಬ್ರೇಕ್‌ಫಾಸ್ಟ್ ವಿತ್ ಚಾಂಪಿಯನ್ಸ್ ಸಂಚಿಕೆಯಲ್ಲಿ ಕೊಹ್ಲಿ ಹೇಳಿದ್ದರು.
2017ರಲ್ಲಿ ಕೊಲಂಬೊದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಕೊಹ್ಲಿ ಕೊನೆಯ ಬಾರಿಗೆ ಬೌಲಿಂಗ್ ಮಾಡಿದ್ರು. ಆ ಪಂದ್ಯದಲ್ಲಿ ಅವರು ಕೇವಲ ಎರಡು ಓವರ್‌ಗಳನ್ನು ಬೌಲ್ ಮಾಡಿದ್ದರು. ಭಾರತವು 168 ರನ್‌ಗಳಿಂದ ಪಂದ್ಯವನ್ನು ಗೆದ್ದಿತ್ತು.
https://twitter.com/KohliKlassic/status/1714942766092869797