ಚಟ್ಟೋಗ್ರಾಂ: ಆತಿಥೇಯ ಬಾಂಗ್ಲಾದೇಶದ ವಿರುದ್ಧ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಕ್ಲೀನ್ ಸ್ವೀಪ್ ಮುಖಭಂಗ ತಪ್ಪಿಸಿಕೊಂಡ ಭಾರತ ಭರ್ಜರಿ ಜಯಗಳಿಸಿದೆ.
ಬಾಂಗ್ಲಾ ತಂಡ 2 -1 ಅಂತರದಿಂದ ಸರಣಿ ಜಯಿಸಿದೆ. ಮೂರನೇ ಪಂದ್ಯದಲ್ಲಿ ಭಾರತ 227 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 409 ರನ್ ಗಳಿಸಿತು. ಶಿಖರ್ ಧವನ್ 3,, ಇಶಾನ್ ಕಿಶನ್ 210, ವಿರಾಟ್ ಕೊಹ್ಲಿ 113, ಶ್ರೇಯಸ್ ಅಯ್ಯರ್ 3, ಕೆಎಲ್ ರಾಹುಲ್ 8, ವಾಷಿಂಗ್ಟನ್ ಸುಂದರ್ 37, ಅಕ್ಷರ ಪಟೇಲ್ 20, ಶಾರ್ದುಲ್ ಠಾಕೂರ್ 3, ಕುಲದೀಪ್ ಯಾದವ್ ಅಜೇಯ 3, ಮೊಹಮ್ಮದ್ ಸಿರಾಜ್ ಅಜೇಯ 0 ರನ್ ಗಳಿಸಿದರು. ಬಾಂಗ್ಲಾ ಪರವಾಗಿ ಮುಸ್ತಫೀರ್ ರೆಹಮಾನ್ 1, ಟಸ್ಕಿನ್ ಅಹಮದ್ 2, ಮೆಹಿದಿ ಹಸನ್ 1, ಎಬಡಾಟ್ ಹೊಸೈನ್ 2, ಶಕೀಬ್ ಹಲ್ ಹಸನ್ 2 ವಿಕೆಟ್ ಪಡೆದರು.
ಬೃಹತ್ ಮೊತ್ತದ ಗೆಲುವಿನ ಗುರಿ ಬೆನ್ನತ್ತಿದ ಬಾಂಗ್ಲಾದೇಶ 34 ಓವರ್ ಗಳಲ್ಲಿ 182 ರನ್ ಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಲಿಟ್ಟನ್ ದಾಸ್ 29, ಶಕೀಬ್ ಹಲ್ ಹಸನ್ 43, ಯಾಸಿರ್ ಅಲಿ 25, ಮಹಮದ್ ವುಲ್ಲಾ 20, ತಸ್ಕಿನ್ ಅಹಮದ್ ಅಜೇಯ 17 ರನ್ ಗಳಿಸಿದರು. ಭಾರತದ ಪರವಾಗಿ ಶಾರ್ದುಲ್ ಠಾಕೂರ್ 3, ಅಕ್ಷರ ಪಟೇಲ್ 2, ಉಮ್ರಾನ್ ಮಲಿಕ್ 2ಡು ಹಾಗೂ ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್ ತಲಾ 1 ವಿಕೆಟ್ ಪಡೆದರು.