ಸ್ನಾಯು ಸೆಳೆತದಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ 20 ಸರಣಿಯಿಂದ ಹೊರಗುಳಿದಿದ್ದ ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಇದೀಗ ಟೆಸ್ಟ್ ಪಂದ್ಯದಿಂದಲೂ ಹೊರಗುಳಿಯುವ ಸಾಧ್ಯತೆ ಇದೆ.
ಡಿಸೆಂಬರ್ 17ರಿಂದ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಮ್ಯಾಚ್ಗೆ ಜಡೇಜಾ ಲಭ್ಯರಾಗ್ತಾರೆ ಅಂತಾ ಅಭಿಮಾನಿಗಳು ಆಶಿಸಿದ್ದರು. ಆದರೆ, ಇದೀಗ ಜಡೇಜಾ ಮೊದಲ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗೋದು ಡೌಟ್ ಎನ್ನಲಾಗ್ತಿದೆ.
ಆಸ್ಟ್ರೇಲಿಯಾ ವಿರುದ್ಧದ ಟಿ 20 ಪಂದ್ಯದಲ್ಲಿ ಟೀಂ ಎಲೆವನ್ನಲ್ಲಿ ಸ್ಥಾನ ಪಡೆದಿದ್ದ ಜಡೇಜಾ ಸ್ನಾಯು ಸೆಳೆತದಿಂದ ಪಂದ್ಯದಿಂದ ಹೊರಗುಳಿದಿದ್ದರು. ಈ ಸ್ಥಾನವನ್ನ ಯಜುವೇಂದ್ರ ಚಹಲ್ ತುಂಬಿದ್ದರು. ಇದೀಗ ಮೊದಲ ಟೆಸ್ಟ್ ಪಂದ್ಯಕ್ಕೂ ಜಡೇಜಾ ಅಲಭ್ಯರಾದರೆ ಟೀಂ ಇಂಡಿಯಾ ತಂಡಕ್ಕೆ ಭಾರೀ ದೊಡ್ಡ ಹೊಡೆತ ಬೀಳಲಿದೆ.