ಲಾಡರ್‌ಹಿಲ್: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಕೊನೆ ಪಂದ್ಯವನ್ನು 88 ರನ್ ಗಳಿಂದ ಗೆದ್ದ ಟೀಂ ಇಂಡಿಯಾ 4-1 ಅಂತರದಿಂದ ಸರಣಿ ಜಯಿಸಿದೆ.
ಶ್ರೇಯಸ್ ಅಯ್ಯರ್ 64 ರನ್ ಗಳಿಸಿ ಫಾರ್ಮ್ ಗೆ ಮರಳಿದ್ದಾರೆ, ಸ್ಪಿನ್ನರ್ ಗಳು ಕರಾರುವಕ್ಕಾದ ದಾಳಿ ನಡೆಸಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದರು. ಭಾರತ ವೆಸ್ಟ್ ಇಂಡೀಸ್ ವಿರುದ್ಧ ಮತ್ತೊಂದು ಏಕಪಕ್ಷೀಯ 88 ರನ್ ಗಳ ಜಯ ದಾಖಲಿಸಿ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಮುಕ್ತಾಯಗೊಳಿಸಿತು. ಅಯ್ಯರ್ ಅವರ ಅರ್ಧಶತಕ ಮತ್ತು ದೀಪಕ್ ಹೂಡಾ(25 ಎಸೆತಗಳಲ್ಲಿ 38) ಮತ್ತು ಸ್ಟ್ಯಾಂಡ್-ಇನ್ ನಾಯಕ ಹಾರ್ದಿಕ್ ಪಾಂಡ್ಯ(16 ಎಸೆತಗಳಲ್ಲಿ 28) ಅವರ ಉಪಯುಕ್ತ ಕೊಡುಗೆಯಿಂದ ಭಾರತ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 188 ರನ್ ಗಳಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ಇಶಾನ್ ಕಿಶನ್ 11, ಶ್ರೇಯಸ್ ಅಯ್ಯರ್ 64, ದೀಪಕ್ ಹೂಡ 38, ಸಂಜು ಸ್ಯಾಮ್ಸನ್ 15, ಹಾರ್ದಿಕ್ ಪಾಂಡ್ಯ 28, ದಿನೇಶ್ ಕಾರ್ತಿಕ್ 12, ಅಕ್ಷರ್ ಪಟೇಲ್ 9 ರನ್ ಗಳಿಸಿದರು. ವಿಂಡಿಸ್ ಪರವಾಗಿ ಜೇಸನ್ ಹೋಲ್ಡರ್, ಡೊಮಿನಿಕ್ ಡ್ರೇಕ್ಸ್, ಹೇಡನ್ ವಾಲ್ಷ್ ತಲಾ 1 ಒಡೆನ್ ಸ್ಮಿತ್ 3 ವಿಕೆಟ್ ಕಬಳಿಸಿದರು.
ವೆಸ್ಟ್ ಇಂಡೀಸ್ 15.4 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 100 ರನ್ ಗಳಿಸಿತು. ಜೇಸನ್ ಹೋಲ್ಡರ್ 0, ಶಾಮ್ರಾ ಬ್ರೂಕ್ಸ್ 13, ಡೇವೊನ್ ಥಾಮಸ್ 10, ಶಿಮ್ರಾನ್ ಹೆಟ್ಮಯರ್ 56, ನಿಕೋಲಸ್ ಪೂರನ್ 3, ರಾವ್ ಮನ್ ಪೊವೆಲ್ 9, ಕೋಮೋ ಪೌಲ್ 0, ಡೊಮಿನಿಕ್ ಡ್ರೇಕ್ಸ್ 1, ಒಡೆನ್ ಸ್ಮಿತ್ 0 ರನ್ ಗಳಿಸಿದರು. ಭಾರತದ ಪರ ಅಕ್ಷರ್ ಪಟೇಲ್ 3, ಕುಲದೀಪ್ ಯಾದವ್ 3, ರವಿ ಬಿಷ್ಣೊಯಿ 4 ವಿಕೆಟ್ ಪಡೆದರು.