alex Certify ನನಗೆ ದೇಶವೇ ಮುಖ್ಯ ಎಂದು ಪತಿ ಮುಂದೆ ಹೇಳಿದ್ದರಂತೆ ಸಾನಿಯಾ ಮಿರ್ಜಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನನಗೆ ದೇಶವೇ ಮುಖ್ಯ ಎಂದು ಪತಿ ಮುಂದೆ ಹೇಳಿದ್ದರಂತೆ ಸಾನಿಯಾ ಮಿರ್ಜಾ..!

ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅತ್ಯುತ್ತಮ ಆಟಗಾರ್ತಿ ಅನ್ನೋದ್ರಲ್ಲಿ ನೋ ಡೌಟ್. ದೇಶಕ್ಕಾಗಿ ಆಡುತ್ತಾ ದೇಶವನ್ನು ಪ್ರತಿನಿಧಿಸುತ್ತಾ ಅನೇಕ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾರೆ. ಈ ಆಟಗಾರ್ತಿ 2010ರಲ್ಲಿ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲ್ಲಿಕ್ ಅವರನ್ನು ಮದುವೆಯಾಗಿದ್ದು ಗೊತ್ತೇ ಇದೆ.

ತಮ್ಮ ಮದುವೆ ಹಾಗೂ ಮದುವೆಯ ಮುಂಚಿನ ದಿನಗಳ ಬಗ್ಗೆ ಇವರು ಫೇಸ್‌ ಬುಕ್ ಲೈವ್ ಚಾಟ್‌ನಲ್ಲಿ ಮಾತನಾಡಿದ್ದಾರೆ. ನಾನು ಶೋಯೆಬ್ ಜೊತೆ ಡೇಟಿಂಗ್‌ನಲ್ಲಿ ಇದ್ದಾಗ ನನ್ನ ದೇಶದ ಬಗ್ಗೆಯೇ ಮಾತನಾಡುತ್ತಿದ್ದೆ. ನನ್ನ ದೇಶದ ತಂಡಕ್ಕೆ ಬೆಂಬಲ ನೀಡುತ್ತಿದ್ದೆ. ನಾವು ಭೇಟಿಯಾದಾಗ ಅಥವಾ ಮಾತನಾಡುವಾಗಲೂ ಇದರ ಬಗ್ಗೆಯೇ ಮಾತನಾಡುತ್ತಿದ್ದೆವು.

ಇಂದು ನಾವಿಬ್ಬರೂ ತುಂಬಾ ಚೆನ್ನಾಗಿದ್ದೇವೆ. 2 ವರ್ಷದ ಗಂಡು ಮಗುವಿದೆ. ಇನ್ನು ಮಲ್ಲಿಕ್ ಅವರ ವೃತ್ತಿ ಜೀವನ ಚೆನ್ನಾಗಿದೆ. ಅವರ ಮೇಲೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ. ಹೀಗೆ ಹಲವಾರು ವಿಚಾರಗಳನ್ನು ವೀಕ್ಷಕರು ಹಾಗೂ ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ ಸಾನಿಯಾ ಮಿರ್ಜಾ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...