ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಜೂನ್ 18 ರಿಂದ ನಡೆಯಲಿದೆ. ಪಂದ್ಯ ವೀಕ್ಷಣೆಗೆ ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್, ಟೆಸ್ಟ್ ಪಂದ್ಯದ ಬಗ್ಗೆ ದೊಡ್ಡ ಘೋಷಣೆ ಮಾಡಿದೆ.
ಭಾರತ ಮತ್ತು ನ್ಯೂಜಿಲೆಂಡ್ ಮಧ್ಯದ ಫೈನಲ್ ಪಂದ್ಯ ಡ್ರಾನಲ್ಲಿ ಕೊನೆಗೊಂಡರೆ ಉಭಯ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುವುದು ಎಂದು ಐಸಿಸಿ ಹೇಳಿದೆ. ಎಲ್ಲ ಐದು ದಿನಗಳು ಪೂರ್ಣಗೊಂಡಿದ್ದರೂ ಯಾವುದೇ ನಿಶ್ಚಿತ ಫಲಿತಾಂಶ ಬಂದಿಲ್ಲವೆಂದಾದಲ್ಲಿ ಉಭಯ ತಂಡವನ್ನು ಜಂಟಿ ವಿಜೇತರೆಂದು ಘೋಷಿಸಲಾಗುವುದು. ಪಂದ್ಯದ ದಿನವನ್ನು ಹೆಚ್ಚಿಸಲು ಸಾಧ್ಯವಿಲ್ಲವೆಂದು ಐಸಿಸಿ ಹೇಳಿದೆ.
ಜೂನ್ 18ರಿಂದ ಜೂನ್ 22ರವರೆಗೆ ಪಂದ್ಯ ನಡೆಯಲಿದೆ. ಇದ್ರಲ್ಲಿ ಸಮಯ ವ್ಯರ್ಥವಾಗದಂತೆ ನೋಡಿಕೊಳ್ಳಲು ಐಸಿಸಿ ಎಲ್ಲ ವ್ಯವಸ್ಥೆ ಮಾಡಿದೆ. ಜೂನ್ 23 ಸುರಕ್ಷಿತ ದಿನವಾಗಿರಲಿದೆ. ಸುರಕ್ಷಿತ ದಿನವನ್ನು ಬಳಸಬೇಕೆ, ಬೇಡ್ವೆ ಎಂಬುದನ್ನು ಐದನೇ ದಿನದ ಕೊನೆ ಸಮಯದಲ್ಲಿ ತೆಗೆದುಕೊಳ್ಳಲಾಗುವುದು.