alex Certify ಟಿ20 ವಿಶ್ವಕಪ್: ಭಾರತದ ವಿರುದ್ಧ ಗೆಲ್ಲಲು ಪಾಕ್ ತಂಡಕ್ಕೆ ವಿಚಿತ್ರ ಸಲಹೆ ನೀಡಿದ ಶೋಯಬ್ ಆಖ್ತರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ20 ವಿಶ್ವಕಪ್: ಭಾರತದ ವಿರುದ್ಧ ಗೆಲ್ಲಲು ಪಾಕ್ ತಂಡಕ್ಕೆ ವಿಚಿತ್ರ ಸಲಹೆ ನೀಡಿದ ಶೋಯಬ್ ಆಖ್ತರ್

ಐಸಿಸಿ ಟಿ20 ವಿಶ್ವಕಪ್ ನಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ದುಬೈನಲ್ಲಿ ಉಭಯ ತಂಡಗಳು ಮುಖಾಮುಖಿಯಾಗುವುದರೊಂದಿಗೆ ವಿಶ್ವಕಪ್ ನಲ್ಲಿ ಅಭಿಯಾನ ಆರಂಭಿಸಲಿವೆ. ಭಾರತ ಕೊನೆಯ ಬಾರಿಗೆ 2013 ರಲ್ಲಿ ಐಸಿಸಿ ಪ್ರಶಸ್ತಿ ಜಯಿಸಿದೆ. 2017 ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಪಾಕಿಸ್ತಾನ ಸೋಲಿಸುವ ಮೂಲಕ ಟ್ರೋಫಿಯನ್ನು ಗೆದ್ದುಕೊಂಡಿದೆ.

ಪ್ರಸ್ತುತ ಟಿ20 ವಿಶ್ವಕಪ್ -2021 ನಡೆಯುತ್ತಿರುವ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಆಟಗಾರ ಶೋಯಿಬ್ ಅಖ್ತರ್, ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ಪಂದ್ಯವನ್ನು ಗೆಲ್ಲಲು ಮೂರು ಸಲಹೆ ನೀಡಿದ್ದಾರೆ.

ವಿಚಿತ್ರವೆಂದರೆ ಅವರು ನೀಡಿದ ಮೂರು ಸಲಹೆಗಳು ಕೂಡ ತಮಾಷೆಯಾಗಿವೆ. ಭಾರತ ಪಾಕಿಸ್ತಾನ ವಿರುದ್ಧದ  ನಡೆಯುವ ಹೈವೋಲ್ಟೇಜ್ ಪಂದ್ಯ ಭಾರಿ ಕುತೂಹಲ ಮೂಡಿಸಿರುವ ಹೊತ್ತಲ್ಲಿ ಶೋಯಬ್ ಅಖ್ತರ್ ನೀಡಿರುವ ಸಲಹೆಗಳು ತಮಾಷೆಯಾಗಿವೆ. ಐಸಿಸಿ ಟಿ20 ವಿಶ್ವಕಪ್ ಸ್ಪರ್ಧೆಗಳಲ್ಲಿ ಭಾರತ ಪಾಕಿಸ್ತಾನವನ್ನು 5 ಬಾರಿ ಸೋಲಿಸಿದೆ

ಭಾರತಕ್ಕೆ ಸ್ಲೀಪಿಂಗ್ ಪಿಲ್ಸ್ ನೀಡಿ ಎಂದ ಶೋಯೆಬ್ ಅಖ್ತರ್

ಶೋಯೆಬ್ ಅಕ್ತರ್ ನೀಡಿರುವ ಸಲಹೆಗಳೆಂದರೆ ಮೊದಲು ಭಾರತ ತಂಡಕ್ಕೆ ನಿದ್ರೆ ಮಾತ್ರೆಗಳನ್ನು ನೀಡಿ, ಎರಡನೇಯದು ವಿರಾಟ್ ಕೊಹ್ಲಿ ಎರಡು ದಿನಗಳ ಕಾಲ ಇನ್ಸ್ಟಾಗ್ರಾಂ ಬಳಸುವುದನ್ನು ನಿಲ್ಲಿಸಿ, ಮೂರನೇದು ಎಂ.ಎಸ್. ಧೋನಿ ಸ್ವತಃ ಬ್ಯಾಟಿಂಗ್ ಮಾಡಲು ಬರದಂತೆ ಕೇಳಿಕೊಳ್ಳಿ. ಏಕೆಂದರೆ, ಅವರು ಇನ್ನೂ ಹೆಚ್ಚು ಫಾರ್ಮ್ ನಲ್ಲಿರುವ ಬ್ಯಾಟರ್ ಆಗಿದ್ದಾರೆ ಎಂದು ಪಾಕಿಸ್ತಾನ ತಂಡಕ್ಕೆ ಅವರು ಮೂರು ತಮಾಷೆ ಸಲಹೆ ನೀಡಿದ್ದಾರೆ.

ಭಾರತದ ಕ್ರಿಕೆಟಿಗ ಹರಭಜನ್ ಸಿಂಗ್ ಅವರೊಂದಿಗೆ ಈ ರೀತಿ ತಮಾಷೆಯ ಮಾತುಗಳನ್ನಾಡಿದ ಶೋಯಿಬ್ ಅಖ್ತರ್, ಬಳಿಕ ಪಾಕಿಸ್ತಾನ ತಂಡಕ್ಕೆ ಅನುಸರಿಸಬೇಕಾಗಿರುವ ಗಂಭೀರ ಕಾರ್ಯತಂತ್ರದ ಬಗ್ಗೆ ಸಲಹೆ ನೀಡಿದ್ದಾರೆ. ಉತ್ತಮ ಆರಂಭ ಪಡೆಯಬೇಕು. ಡಾಟ್ ಬಲಗಳನ್ನು ತಪ್ಪಿಸಬೇಕು. 5 -6 ರನ್-ಎ-ಬಾಲ್ ಆಡಬೇಕು ಮತ್ತು ನಂತರ ಸ್ಟ್ರೈಕ್ ರೇಟ್ ಅನ್ನು ಹೆಚ್ಚಿಸಬೇಕು. ಬೌಲಿಂಗ್ ವಿಷಯಕ್ಕೆ ಬಂದಾಗ ವಿಕೆಟ್ ಪಡೆಯಲು ನಿರಂತರವಾಗಿ ನಿಖರವಾಗಿ ಬೌಲಿಂಗ್ ಮಾಡಿ ವಿಕೆಟ್ ಪಡೆಯಬೇಕು ಎಂದು ತಿಳಿಸಿದ್ದಾರೆ.

ಭಾರತದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು, ಪಾಕಿಸ್ತಾನ ವಿರುದ್ಧ ಗೆಲ್ಲಲು ಅನುಸರಿಸಬೇಕಾದ ಮೂರು ಸಲಹೆಗಳನ್ನು ಮುಂದಿಟ್ಟಿದ್ದಾರೆ. ಭಾರತ ತಂಡ ಉತ್ತಮ ಆರಂಭ ಪಡೆಯಬೇಕು. ಪಾಕಿಸ್ತಾನ ವಿರುದ್ಧದ ಪಂದ್ಯವೆಂದು ಹೆಚ್ಚು ಒತ್ತಡಕ್ಕೆ ಒಳಗಾಗಬಾರದು. ಪಾಕಿಸ್ತಾನ ವಿರುದ್ಧ ನಡೆದ ನಡೆದ 8 ಟಿ20 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಭಾರತ ಜಯಿಸಿದ್ದು, ಅದರಲ್ಲಿ 5 ಪಂದ್ಯಗಳನ್ನು ವಿಶ್ವಕಪ್ ನಲ್ಲಿ ಜಯಿಸಿದೆ.

https://www.instagram.com/p/CVZTg3YF-Ac/?utm_source=ig_embed&ig_rid=06681bb9-4335-4193-88d6-8d245572576e

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...