ನವದೆಹಲಿ: ಐಸಿಸಿ 2024 ಮತ್ತು 2031 ರ ನಡುವಿನ T20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವಕಪ್ ಆತಿಥೇಯರನ್ನು ಘೋಷಿಸಿದೆ.
ಮೂರು ದೊಡ್ಡ ಪಂದ್ಯಾವಳಿಗಳನ್ನು ಆಯೋಜಿಸಲು ಭಾರತವನ್ನು ಆಯ್ಕೆ ಮಾಡಲಾಗಿದೆ. ಭಾರತ 2026 ರಲ್ಲಿ ಶ್ರೀಲಂಕಾ ಜೊತೆಗೆ T20 ವಿಶ್ವಕಪ್ ಗೆ ಆತಿಥ್ಯ ವಹಿಸಲಿದೆ. ಅಲ್ಲದೆ, 2029 ರಲ್ಲಿ, ಭಾರತವು ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸಲಿದೆ. 2031 ರಲ್ಲಿ ಭಾರತ ಮತ್ತು ಬಾಂಗ್ಲಾದೇಶ ಒಟ್ಟಾಗಿ ವಿಶ್ವಕಪ್ ಆತಿಥ್ಯ ವಹಿಸಲಿದೆ.
ಮುಂಬರುವ ವರ್ಷಗಳಲ್ಲಿ 14 ವಿವಿಧ ರಾಷ್ಟ್ರಗಳು ಐಸಿಸಿ ಪಂದ್ಯಾವಳಿಗಳನ್ನು ಆಯೋಜಿಸಲಿವೆ ಎಂದು ಐಸಿಸಿ ಹೇಳಿದೆ. 2017ರಲ್ಲಿ ಕೊನೆಯದಾಗಿ ನಡೆದ ಚಾಂಪಿಯನ್ಸ್ ಟ್ರೋಫಿ ಕೂಡ ಪುನರಾಗಮನವಾಗಲಿದೆ. ಐಸಿಸಿ ಮುಂದಿನ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ(ವರ್ಷ 2025) ಮತ್ತು ಭಾರತ (ವರ್ಷ 2029)ದಲ್ಲಿ ಆಯೋಜಿಸಲಿದೆ.
ICC ಪ್ರತಿ ವರ್ಷ 2024 ರಿಂದ 2031 ರವರೆಗೆ ದೊಡ್ಡ ಪಂದ್ಯಾವಳಿಯನ್ನು ಆಯೋಜಿಸುತ್ತದೆ. ICC ಯ ಯೋಜನೆಯ ಪ್ರಕಾರ, ಮೊದಲ ಬಾರಿಗೆ ಅಮೆರಿಕದಲ್ಲಿ ಪ್ರಮುಖ ICC ಪಂದ್ಯಾವಳಿ ಆಯೋಜಿಸಲಾಗುತ್ತದೆ. 2024ರ ಟಿ20 ವಿಶ್ವಕಪ್ ಅಮೆರಿಕದಲ್ಲಿ ನಡೆಯಲಿದೆ. ಅಮೆರಿಕದ ಜೊತೆಗೆ ವೆಸ್ಟ್ ಇಂಡೀಸ್ ಕೂಡ ಹೋಸ್ಟ್ ಮಾಡಲಿದೆ.
ಅಚ್ಚರಿ ಬೆಳವಣಿಗೆಯಲ್ಲಿ ICC 2025 ರ ಚಾಂಪಿಯನ್ಸ್ ಟ್ರೋಫಿಯ ಹೋಸ್ಟಿಂಗ್ ಹಕ್ಕನ್ನು ಪಾಕಿಸ್ತಾನಕ್ಕೆ ನೀಡಿದೆ. ಸುಮಾರು 29 ವರ್ಷಗಳ ನಂತರ, ಪಾಕಿಸ್ತಾನ ತನ್ನ ತವರು ನೆಲದಲ್ಲಿ ಐಸಿಸಿ ಟೂರ್ನಿ ಆಯೋಜಿಸುತ್ತದೆ. ಕಳೆದ ಬಾರಿ ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನ ಜಂಟಿಯಾಗಿ ಆಯೋಜಿಸಿದ್ದ 1996 ರ ವಿಶ್ವಕಪ್‌ನಲ್ಲಿ ಪಾಕಿಸ್ತಾನವು ಪ್ರಮುಖ ICC ಪಂದ್ಯಾವಳಿಯನ್ನು ಆಯೋಜಿಸಿತ್ತು. ಐಸಿಸಿಯ ಮಹತ್ವದ ನಿರ್ಧಾರದ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ರಮೀಜ್ ರಾಜಾ ಸಂತಸ ವ್ಯಕ್ತಪಡಿಸಿದ್ದಾರೆ.
ICC 8 ಹೊಸ ಪಂದ್ಯಾವಳಿ ಸಂಪೂರ್ಣ ಪಟ್ಟಿ
2024 T20 ವಿಶ್ವಕಪ್ – ವೆಸ್ಟ್ ಇಂಡೀಸ್ ಮತ್ತು ಅಮೆರಿಕ
2025 ಚಾಂಪಿಯನ್ಸ್ ಟ್ರೋಫಿ – ಪಾಕಿಸ್ತಾನ
2026 T20 ವಿಶ್ವಕಪ್ – ಭಾರತ ಮತ್ತು ಶ್ರೀಲಂಕಾ
2027 ವಿಶ್ವಕಪ್ – ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ
2028 T20 ವಿಶ್ವಕಪ್ – ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್
2029 ಚಾಂಪಿಯನ್ಸ್ ಟ್ರೋಫಿ – ಭಾರತ
2030 T20 ವಿಶ್ವಕಪ್ – ಇಂಗ್ಲೆಂಡ್, ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್
2031 ವಿಶ್ವಕಪ್ – ಭಾರತ ಮತ್ತು ಬಾಂಗ್ಲಾದೇಶ