
ಭುವನೇಶ್ವರ: ಭಾರತದ ಪುರುಷರ ಹಾಕಿ ಆಟಗಾರ ಮತ್ತು ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬೀರೇಂದ್ರ ಲಾಕ್ರಾ ತಮ್ಮ ಬಾಲ್ಯದ ಗೆಳೆಯ ಆನಂದ್ ಟೊಪ್ಪೊ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಮೃತರ ತಂದೆ ಮಂಗಳವಾರ ಈ ಬಗ್ಗೆ ಬೀರೇಂದ್ರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಆನಂದ್ ಟೊಪ್ಪೊ ನಿಗೂಢ ಪರಿಸ್ಥಿತಿಯಲ್ಲಿ ಬೀರೇಂದ್ರ ಅವರಿಗೆ ಸೇರಿದ ಫ್ಲ್ಯಾಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದರು.
ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಆನಂದ್ ಟೊಪ್ಪೊ ಅವರು ಸಾಯುವ ಎರಡು ವಾರಗಳ ಮೊದಲು ಫೆಬ್ರವರಿ 16 ರಂದು ವಿವಾಹವಾಗಿದ್ದರು. ಬೀರೇಂದ್ರ ಅವರು ಹಿಂದೆ ಡಿಎಸ್ಪಿಯಾಗಿ ಸೇವೆ ಸಲ್ಲಿಸಿದ್ದರಿಂದ ರಾಜ್ಯ ಪೊಲೀಸರು ಅವರನ್ನು ರಕ್ಷಿಸುತ್ತಿದ್ದಾರೆ ಎಂದು ಮೃತರ ತಂದೆ ಬಂಧನ್ ಟೊಪ್ಪೊ ಆರೋಪಿಸಿದ್ದಾರೆ.