ಸೋಮವಾರ ಗ್ರೀಸ್ ನ ಹೆರಾಕ್ಲಿಯನ್ ನಲ್ಲಿ ನಡೆದ ಐಡಬ್ಲ್ಯುಎಫ್ ಜೂನಿಯರ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಹರ್ಷದಾ ಶರದ್ ಗರುಡ್ ವೇಟ್ ಲಿಫ್ಟಿಂಗ್ ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗಳಿಸಿದರು.
ಮಹಿಳೆಯರ 45 ಕೆಜಿ ವಿಭಾಗದಲ್ಲಿ ಹರ್ಷದಾ ಅವರು ಒಟ್ಟು 153 ಕೆಜಿ(70 ಕೆಜಿ + 83 ಕೆಜಿ) ಪ್ರಯತ್ನದಲ್ಲಿ ಚಿನ್ನದ ಪದಕವನ್ನು ಗೆದ್ದರು.
ಹರ್ಷದಾ ಸ್ನ್ಯಾಚ್ನಲ್ಲಿ 70 ಕೆಜಿ ಪ್ರಯತ್ನದಲ್ಲಿ ಮೊದಲ ಸ್ಥಾನ ಗಳಿಸಿದರೆ, ಕ್ಲೀನ್ ಮತ್ತು ಜರ್ಕ್ನಲ್ಲಿ 85 ಕೆಜಿ ಪ್ರಯತ್ನದಲ್ಲಿ ಎರಡನೇ ಸ್ಥಾನ ಪಡೆದರು, ಟರ್ಕಿಯ ಬೆಕ್ಟಾಸ್ ಕ್ಯಾನ್ಸು(85 ಕೆಜಿ) ಅವರು ಒಟ್ಟು 150 ಕೆಜಿ(65 ಕೆಜಿ + 85 ಕೆಜಿ) ಪ್ರಯತ್ನದಲ್ಲಿ ಬೆಳ್ಳಿ ಗೆದ್ದರು. 149 ಕೆಜಿ (67 ಕೆಜಿ+82 ಕೆಜಿ) ತೂಕದೊಂದಿಗೆ ಮೊಲ್ಡೊವಾದ ಹಿಂಕು ಟಿಯೊಡೊರಾ-ಲುಮಿನಿಟಾ ಕಂಚು ಗೆದ್ದರು.
ಸ್ಪರ್ಧೆಯಲ್ಲಿದ್ದ ಇತರ ಭಾರತೀಯ ಆಟಗಾರ್ತಿ ಅಂಜಲಿ ಪಟೇಲ್ 148 ಕೆಜಿ (67 ಕೆಜಿ+81 ಕೆಜಿ) ಒಟ್ಟಾರೆ ಐದನೇ ಸ್ಥಾನ ಪಡೆದರು.
2013 ರಲ್ಲಿ ಕಂಚು ಗೆದ್ದಿದ್ದ ಮೀರಾಬಾಯಿ ಚಾನು ಮತ್ತು ಕಳೆದ ವರ್ಷ ಬೆಳ್ಳಿ ಗೆದ್ದಿದ್ದ ಅಚಿಂತಾ ಶೆಯುಲಿ ಅವರು ಜೂನಿಯರ್ ಜಾಗತಿಕ ಟೂರ್ನಿಯಲ್ಲಿ ಪದಕ ಗೆದ್ದ ಇತರ ಭಾರತೀಯರಾಗಿದ್ದಾರೆ.