ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯಾ ಸಹೋದರ ಕ್ರುನಾಲ್ ಜನ್ಮದಿನಾಚರಣೆಯ ಸಂಭ್ರಮದಲ್ಲಿದ್ದಾರೆ. ಹೀಗಾಗಿ ಪಾಂಡ್ಯಾ ತನ್ನ ಸಹೋದರನಿಗೆ ಹುಟ್ಟು ಹಬ್ಬದ ಶುಭಕೋರುವ ವಿಡಿಯೋವನ್ನ ಶೇರ್ ಮಾಡಿದ್ದು ಅಭಿಮಾನಿಗಳು ಫುಲ್ ಖುಶ್ ಆಗಿದ್ದಾರೆ.
ಪುಣೆಯಲ್ಲಿ ನಡೆದ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದ ಮೂಲಕ ಕ್ರುನಾಲ್ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದಾರೆ. ಕೇವಲ 26 ಎಸೆತಗಳಲ್ಲೇ ಅರ್ಧಶತಕ ಪೂರೈಸಿದ ಕ್ರುನಾಲ್ ಚೊಚ್ಚಲ ಪಂದ್ಯದಲ್ಲೇ ವಿಶ್ವ ದಾಖಲೆ ಬರೆದಿದ್ದಾರೆ.
31 ಬಾಲ್ಗಳಿಗೆ ಕ್ರುನಾಲ್ 58 ರನ್ಗಳನ್ನ ಗಳಿಸಿದ್ದು ಟೀಂ ಇಂಡಿಯಾ ಗೆಲುವಿನ ನಗೆ ಬೀರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪಂದ್ಯ ಮುಗಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ ಹಾರ್ದಿಕ್ ಪಾಂಡ್ಯಾ, ತಂದೆಗೆ ಹೆಮ್ಮೆ ಎನಿಸುತ್ತಿರಬಹುದು. ನಿನ್ನ ನೋಡಿ ತಂದೆ ನಗುತ್ತಿದ್ದಾರೆ ಸಹೋದರ, ಅವರು ನಿನಗಾಗಿ ಬರ್ತಡೇ ಉಡುಗೊರೆ ಕಳಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಹುಟ್ಟು ಹಬ್ಬಕ್ಕೆ ಶುಭ ಕೋರುತ್ತಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
https://www.instagram.com/p/CMydOp-Dvii/?utm_source=ig_web_copy_link