ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಐಪಿಎಲ್ ತಯಾರಿ ನಡೆಸುತ್ತಿದ್ದಾರೆ. ಹಾಗಾಗಿ ಸದ್ಯ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ಜೊತೆಗಿದ್ದಾರೆ. ಈ ಸಂದರ್ಭದಲ್ಲಿ ಪಾಂಡ್ಯ ಪತ್ನಿ ಹಾಗೂ ಮಗುವನ್ನು ಮಿಸ್ ಮಾಡ್ತಿದ್ದಾರೆ.
ಚಾಟ್ ಮೂಲಕ ಪತ್ನಿ ಜೊತೆ ಮಾತನಾಡಿದ್ದಾರೆ. ಅದ್ರ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪಾಂಡ್ಯ, ನನ್ನಿಬ್ಬರು ದೇವತೆಗಳನ್ನು ನಾನು ಮಿಸ್ ಮಾಡಿಕೊಳ್ತಿದ್ದೇನೆ. ನೀವಿಬ್ಬರೂ ನನ್ನ ಜೀವನದಲ್ಲಿ ಬಂದಿದ್ದು ನನ್ನ ಅದೃಷ್ಟ ಎಂದಿದ್ದಾರೆ.
ಕೆಲ ದಿನಗಳ ಹಿಂದಷ್ಟೆ ನತಾಶಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅದಕ್ಕೆ ಅಗಸ್ತ್ಯ ಎಂದು ಹೆಸರಿಡಲಾಗಿದೆ. ಸೆಪ್ಟೆಂಬರ್ 19ರಿಂದ ಐಪಿಎಲ್ ಪಂದ್ಯ ಶುರುವಾಗಲಿದ್ದು,ಐಪಿಎಲ್ ಆಟಗಾರರು ಯುಎಇಗೆ ಪ್ರಯಾಣ ಬೆಳೆಸುತ್ತಿದ್ದಾರೆ.