
ಅಲ್ಲದೇ ಭಾರತೀಯರಿಗೆ ಕೊರೊನಾದಿಂದ ಪಾರಾಗಲು ಲಸಿಕೆಯ ಅಗತ್ಯವಿಲ್ಲ ಅನ್ನೋದಕ್ಕೂ ಹರ್ಭಜನ್ ಸಿಂಗ್ ಮಾರ್ಮಿಕವಾಗಿ ಕಾರಣ ನೀಡಿದ್ದಾರೆ.
ಹರ್ಭಜನ್ ಸಿಂಗ್ ಪೋಸ್ಟ್ ಮಾಡಿರುವ ಟ್ವೀಟ್ನಲ್ಲಿ ಹರ್ಭಜನ್ ಸಿಂಗ್ ಲಸಿಕೆ ಏಕೆ ಅಗತ್ಯವಿಲ್ಲ ಅನ್ನೋದನ್ನ ವಿವರಿಸಿದ್ದಾರೆ.
ಕೊರೊನಾ ವಿರುದ್ಧ ಫೈಜರ್ ಹಾಗೂ ಬಯೋಟೆಕ್ 94 ಪ್ರತಿಶತ ಪರಿಣಾಮಕಾರಿಯಾಗಿದೆ. ಮೊರ್ಡೆನಾ ಲಸಿಕೆ 90 ಪ್ರತಿಶತ ಹಾಗೂ ಆಕ್ಸ್ಫರ್ಡ್ ಲಸಿಕೆ 93.6 ಪ್ರತಿಶತ ಪರಿಣಾಮಕಾರಿಯಾಗಿದೆ.
ಆದರೆ ಭಾರತ ಯಾವುದೇ ಲಸಿಕೆಯೇ ಇಲ್ಲದೇ 93.6 ಪ್ರತಿಶತ ರಿಕವರಿ ರೇಟ್ ಹೊಂದಿದೆ. ಇಷ್ಟೊಳ್ಳೆ ರಿಕವರಿ ರೇಟ್ ಹೊಂದಿರುವ ನಮಗೆ ನಿಜಕ್ಕೂ ಲಸಿಕೆ ಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.
ಹರ್ಭಜನ್ ಸಿಂಗ್ ಪೋಸ್ಟ್ ನೋಡಿ ಅನೇಕರು ಶಹಬ್ಬಾಸ್ ಅಂದಿದ್ರೆ ಇನ್ನೂ ಕೆಲವರು ಇಂತಹ ಮೂರ್ಖತನದ ವಿಚಾರಗಳನ್ನ ಶೇರ್ ಮಾಡಬೇಡಿ ಎಂದು ಕಮೆಂಟ್ ಮಾಡಿದ್ದಾರೆ.