ಗುಲ್ಜಾರ್ ಇಂದರ್ ಚಹಾಲ್ ಅವರ ಅಧ್ಯಕ್ಷತೆಯ ಪಂಜಾಬ್ ಕ್ರಿಕೆಟ್ ಸಂಸ್ಥೆಯಲ್ಲಿ(ಪಿಸಿಎ) ಕಾನೂನುಬಾಹಿರ ಚಟುವಟಿಕೆ ನಡೆಯುತ್ತಿವೆ ಎಂದು ಭಾರತದ ಮಾಜಿ ಸ್ಪಿನ್ನರ್ ಮತ್ತು ರಾಜ್ಯಸಭಾ ಸದಸ್ಯ ಹರ್ಭಜನ್ ಸಿಂಗ್ ಅವರು ಆರೋಪಿಸಿದ್ದಾರೆ.
ಪಿಸಿಎ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಯ ಕೊರತೆ ಇದೆ ಎಂದು ಕಳವಳ ವ್ಯಕ್ತಪಡಿಸಿರುವ ಸಿಂಗ್, ಬಹಿರಂಗ ಪತ್ರ ಬರೆದಿದ್ದಾರೆ.
10 ದಿನಗಳಿಂದ ಪಂಜಾಬ್ ನ ಕ್ರಿಕೆಟ್ ಪ್ರೇಮಿಗಳಿಂದ ಪ್ರಸ್ತುತ ಅಧ್ಯಕ್ಷರ ಅಡಿಯಲ್ಲಿ ಪಿಸಿಎ ಸಾಕಷ್ಟು ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಿದೆ ಎಂದು ಹಲವಾರು ದೂರುಗಳನ್ನು ಸ್ವೀಕರಿಸುತ್ತಿದ್ದೇನೆ, ಇದು ಪಾರದರ್ಶಕತೆಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಪಿಸಿಎ ಕಾರ್ಯಚಟುವಟಿಕೆಗಳು ಬಿಸಿಸಿಐ ಸಂವಿಧಾನ, ಪಿಸಿಎ ಮಾರ್ಗಸೂಚಿಗಳು ಮತ್ತು ಕ್ರೀಡಾ ಸಂಸ್ಥೆಗಳ ಆಡಳಿತದಲ್ಲಿ ಪಾರದರ್ಶಕತೆ ಮತ್ತು ನೈತಿಕ ಮಾನದಂಡಗಳಿಗೆ ವಿರುದ್ಧವಾಗಿವೆ. ತಮ್ಮ ಕಾನೂನುಬಾಹಿರ ಚಟುವಟಿಕೆಗಳನ್ನು ಮರೆಮಾಡಲು, ಅವರು ಪಿಸಿಎಯ ಔಪಚಾರಿಕ ಸಭೆಗಳನ್ನು ಆಯೋಜಿಸುತ್ತಿಲ್ಲ ಮತ್ತು ಅವರ ಸ್ವಾರ್ಥಿ ಉದ್ದೇಶಗಳಿಗಾಗಿ ಎಲ್ಲಾ ನಿರ್ಧಾರಗಳನ್ನು ಸ್ವಯಂಪ್ರೇರಿತವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.